Site icon Vistara News

Video: HALನಲ್ಲಿ ಭಯಾನಕ ರೀತಿಯಲ್ಲಿ ಲ್ಯಾಂಡ್ ಆದ ವಿಮಾನ; ರನ್​ವೇಗೆ ಅಪ್ಪಳಿಸಿದ ಮುಂದಿನ ಚಕ್ರ

Aircraft Landing

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಏರ್​ಪೋರ್ಟ್​​ನಲ್ಲಿ ದೊಡ್ಡಮಟ್ಟದ ವಿಮಾನ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಎಚ್​​ಎಎಲ್​​ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ VT-KBN ಎಂಬ ಪ್ರೀಮಿಯರ್​ ಎ1 ವಿಮಾನವೊಂದು ವಾಪಸ್​ ಎಚ್​ಎಲ್​ ಏರ್​ಪೋರ್ಟ್​​ಗೇ ಬಂದು ಭಯಾನಕ ರೀತಿಯಲ್ಲಿ ಲ್ಯಾಂಡಿಂಗ್ (Aircraft Emergency Landing) ಆಗಿದೆ. ವಿಮಾನದ ಮೂಗಿನ ಭಾಗದಲ್ಲಿ (ಮುಂಭಾಗ) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅಪಘಾತವಾಗಿದೆ.

ಎಚ್​ಎಲ್​​ಎನ್​​ನ ರನ್​ವೇ ಮೇಲೆ ಸ್ವಲ್ಪದೂರ ಚಲಿಸಿದ ವಿಮಾನದ ಮುಂದಿನ ಭಾಗ ಅಪ್ಪಳಿಸಿದೆ. ಅಲ್ಲಿ ಮಳೆನೀರು ಕೂಡ ನಿಂತಿತ್ತು. ಲ್ಯಾಂಡ್ ಆದ ರೀತಿ ನೋಡಿದರೆ, ವಿಮಾನ ರನ್​ವೇದಲ್ಲಿ ಮಗುಚಿಬೀಳುತ್ತದೆ ಎಂದೇ ಭಾವಿಸಲಾಗಿತ್ತು. ಅಂಥದ್ದೇನೂ ಆಗದೆ, ಅಂತಿಮವಾಗಿ ಸುರಕ್ಷಿತ ಲ್ಯಾಂಡ್ ಆಗಿದೆ. ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಈ VT-KBN ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ. ಇಬ್ಬರು ಪೈಲೆಟ್​​ಗಳು ಇದ್ದರು. ಅಂತಿಮವಾಗಿ ವಿಮಾನದ ಮುಂದಿನ ಚಕ್ರ ರನ್​ವೇಗೆ ಅಪ್ಪಳಿಸಿದ ರೀತಿಯಲ್ಲಿ ಲ್ಯಾಂಡ್​ ಆಗಿದೆ. ವಿಮಾನ ಎಚ್​ಎಎಲ್​​ನಿಂದ ಹೊರಟ ಕೆಲವೇ ಕ್ಷಣದಲ್ಲಿ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಕೂಡಲೇ ವಿಮಾನವನ್ನು ಪೈಲೆಟ್​ಗಳು ವಾಪಸ್​ ಎಚ್​ಎಎಲ್​​ಗೆ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದಾರೆ. ಈ ವಿಮಾನ ಸೇಫ್​ ಆಗಿ ಲ್ಯಾಂಡ್ ಆಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇನ್ನು ಎಚ್​ಎಎಲ್​ ಏರ್​ಪೋರ್ಟ್​​ನಲ್ಲಿ ಆಗಬಹುದಾದ ಅವಘಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಹೆಚ್ಚಿನ ರಕ್ಷಣಾ ಸಿಬ್ಬಂದಿ ನಿಯೋಜನೆಗೊಂಡಿದ್ದರು.

Exit mobile version