Site icon Vistara News

Wall collapse : ಕುಸಿದ ರಾಜಭವನದ ಕಾಂಪೌಂಡ್‌!

Raj Bhavan compound wall collapses due to heavy rains

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು (Governor Thaawar Chand Gehlot) ವಾಸವಿರುವ ರಾಜಭವನದಲ್ಲಿ (Raj Bhavan) ಕಾಂಪೌಂಡ್‌ (Wall collapse) ಕುಸಿದಿದೆ. ರಾಜ್ಯಪಾಲರ ಕೊಠಡಿಯಿಂದ ಕೂದಲೆಳೆ ಅಂತರದಲ್ಲಿರುವ ಕಾಂಪೌಂಡ್ ಕುಸಿದು ಬಿದ್ದಿದೆ.

ವಿಧಾನಸೌಧ ಮತ್ತು ರಾಜಭವನಕ್ಕೆ ಅಡ್ಡಲಾಗಿ ಇರುವ ಕಾಂಪೌಂಡ್ ಇದಾಗಿದೆ. ವಿಧಾನಸೌಧ ಆವರಣಕ್ಕೆ ಹೊಂದಿರಕೊಂಡಿರುವ ಕಾಂಪೌಂಡ್ ಕುಸಿದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಬೆಂಗಳೂರಲ್ಲಿ ಕಳೆದೊಂದು ವಾರದಿಂದ ಸಂಜೆ ಅಥವಾ ರಾತ್ರಿ ವೇಳೆ ನಿರಂತರವಾಗಿ ಮಳೆ ಬರುತ್ತಿದೆ. ಹೀಗಾಗಿ ಶಿಥಲಗೊಂಡು ಕುಸಿದಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್‌ ಕಾಂಪೌಂಡ್‌ ಕುಸಿಯುವ ವೇಳೆ ಸ್ವಚ್ಚತೆ ಮಾಡುವ ಕಾರ್ಮಿಕರಾಗಲಿ, ಇತರೆ ಸಿಬ್ಬಂದಿಗಳಾಗಲಿ ಇರಲಿಲ್ಲ. ರಾಜಭವನದ ಆವರಣ ಹಾಗೂ ವಿಧಾನಸೌಧ ಆವರಣದಲ್ಲಿ ಯಾರು ಓಡಾಡದ ವೇಳೆ ಕಾಂಪೌಂಡ್‌ ಕುಸಿದಿದೆ. ಹೀಗಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಇದನ್ನೂ ಓದಿ: Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್‌ ಇಲಿ!

Exit mobile version