ಬೆಂಗಳೂರು: ಅಂತರರಾಷ್ಟ್ರೀಯ ಜಲ ಸಂರಕ್ಷಣಾ ದಿನಾಚರಣೆ (Water Conservation Day) ಅಂಗವಾಗಿ ವೈಟ್‌ಫೀಲ್ಡ್‌ನಲ್ಲಿರುವ ನಲ್ಲೂರಹಳ್ಳಿ ಕೆರೆಯ ಸ್ವಚ್ಛತಾ ಅಭಿಯಾನವನ್ನು ವಿಯೋಲಿಯಾ ವಾಟರ್ ಟೆಕ್ನಾಲಜೀಸ್ ಆ್ಯಂಡ್ ಸಲ್ಯೂಶನ್ಸ್ ಕಂಪನಿಯು (Veolia Water Technologies & Solutions, South Asia) ಯು&ಐ ಸ್ವಯಂ ಸೇವಕ ಸಂಸ್ಥೆಯೊಂದಿಗೆ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ವಿಯೋಲಿಯಾ ವಾಟರ್ ಟೆಕ್ನಾಲಜೀಸ್ ಅಂಡ್ ಸಲ್ಯೂಶನ್ಸ್, ದಕ್ಷಿಣ ಏಷಿಯಾ ವಲಯದ ಉಪಾಧ್ಯಕ್ಷ ಗೋಪಾಲ್ ಮದಭೂಷಿ, ತ್ಯಾಜ್ಯ ನೀರನ್ನು ಸಂಸ್ಕರಿಸಲು ಬೇಕಾದಂತಹ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಜತೆಗೆ ಅದರ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಇರುವುದು ಜಲ ಮಾಲಿನ್ಯ ಉಂಟು ಮಾಡುವುದಲ್ಲದೆ, ಜಲ ಸಂರಕ್ಷಣೆ, ನೀರಿನ ಪುನರ್ಬಳಕೆ ಹಾಗೂ ಪುನರ್ಭರ್ತಿ ಮಾಡುವ ಕಾರ್ಯಗಳಿಗೆ ಹೆಚ್ಚಿನ ತೊಂದರೆಗಳನ್ನು ಉಂಟು ಮಾಡುತ್ತಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಪ್ರತಿಶತ 72ರಷ್ಟು ತ್ಯಾಜ್ಯ ನೀರನ್ನು ಭಾರತದ ನಗರಗಳಲ್ಲಿ ಸಂಸ್ಕರಿಸುವುದಿಲ್ಲ ಅಥವಾ ಅತಿ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತದೆ. ತ್ಯಾಜ್ಯ ನೀರನ್ನು ಇನ್ನು ಮುಂದೆ ತ್ಯಾಜ್ಯ ಎಂದು ಪರಿಗಣಿಸಲಾಗದು ಎಂದು ತಿಳಿಸಿದ್ದಾರೆ.
ಈಗಾಗಲೇ ನಮ್ಮ ಸಂಸ್ಥೆಯು ಜಲ ಸಂಸ್ಕಾರಣಾ ಯೋಜನೆಗಳು ಪ್ರಮುಖವಾದ ಕಂಪನಿಗಳಲ್ಲಿ ಹಾಗೂ ವಸತಿ ಸಮುಚ್ಛಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ತ್ಯಾಜ್ಯ ಹಾಗೂ ಜಲ ನಿರ್ವಹಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಇತರೆ ಚಟುವಟಿಕೆಗೆ ಉಪಯೋಗಿಸಲು ಬಹಳ ಉಪಕಾರಿಯಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಉಳಿತಾಯವಾಗಿ ಜನರಿಗೆ ಅನುಕೂಲವಾಗುತ್ತದೆ ಎಂದು ಗೋಪಾಲ್ ಮದಭೂಷಿ ಹೇಳಿದರು.
ಇದನ್ನೂ ಓದಿ: Rapido Bike Vs Auto: ಕಂಡ ಕಂಡಲ್ಲಿ ರ‍್ಯಾಪಿಡೋ ಬೈಕ್ ಚಾಲಕರ ಮೇಲೆ ಹಲ್ಲೆ ಯತ್ನ; ಆಟೋ ಚಾಲಕರ ಕಿರುಕುಳಕ್ಕೆ ಕಂಗಾಲು
ಕಮ್ಯೂನಿಟ್ರೀ ಮೂಲಕ ಪರಿಸರ ರಕ್ಷಣೆ
ಪರಿಸರವನ್ನು ಹಸಿರಾಗಿಸುವ ಹಾಗೂ ಸುಸ್ಥಿರವಾಗಿಸುವ ನಿಟ್ಟಿನಲ್ಲಿ ವಿಯೋಲಿಯಾ ವಾಟರ್ ಟೆಕ್ನಾಲಜೀಸ್ ಆ್ಯಂಡ್ ಸಲ್ಯೂಶನ್ಸ್ ವತಿಯಿಂದ ಕಮ್ಯುನಿಟ್ರೀ (Communitree) ಎಂಬ ಸ್ವಯಂ ಸೇವಕ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ಒಂದು ಹೊಸ ಯೋಜನೆ ಹಾಗೂ ವಿನೂತನ ಯೋಜನೆಯಲ್ಲಿ ಪ್ರತಿಯೊಬ್ಬ ಹೊಸ ಉದ್ಯೋಗಿಯ ಪರವಾಗಿ ಹದಿನೈದು (15) ಗಿಡಗಳನ್ನು ನೆಡುವುದು. ಜತೆಗೆ ಅವುಗಳನ್ನು ಪೋಷಿಸುವುದು ಕಮ್ಯೂನಿಟ್ರೀ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯು ನಮ್ಮ ಭೂಮಿಯನ್ನು ಹಸಿರಾಗಿಸಲು ಮಾಡುತ್ತಿರುವ ಅಳಿಲು ಸೇವೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ