Site icon Vistara News

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

ಬೆಂಗಳೂರು: ಬೇಸಿಗೆ ನೀರಿನ ಸಮಸ್ಯೆ ನಡುವೆ(Water Crisis) ಬೆಂಗಳೂರಿನ 110 ಹಳ್ಳಿಗಳ ಜನಕ್ಕೆ ಜಲಮಂಡಳಿ ಗುಡ್ ನ್ಯೂಸ್ ಕೊಟ್ಟಿದೆ. ಐತಿಹಾಸಿಕ ಸೋಲದೇವನಹಳ್ಳಿ ಪಂಪ್ ಸ್ಟೇಷನ್ (Soladevanahalli pumping station) ಪುನಶ್ಚೇತನ ಮಾಡಿ, ಮುಂದಿನ ವಾರದಿಂದ ಹೆಸರಘಟ್ಟ ಕೆರೆ ನೀರು ಸಂಸ್ಕರಿಸಿ ಪೂರೈಕೆ ಮಾಡಲು ಜಲಮಂಡಳಿ ಮುಂದಾಗಿದೆ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ನೀರು ಪೂರೈಕೆಗೆ ಜಲಮಂಡಳಿ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಾ ಇದೆ. ಅದರಲ್ಲಿ ಪ್ರಮುಖವಾಗಿ ಜಲಮಂಡಳಿ ಹೊಸ ಸಾಹಸಕ್ಕೆ ಮುಂದಾಗಿದ್ದು, ಐತಿಹಾಸಿಕ ಸೋಲದೇವನಹಳ್ಳಿ ಪಂಪ್ ಸ್ಟೇಷನ್ ಮೂಲಕ ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ. ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ನಿಂದ 1896ರಲ್ಲಿ ಬೆಂಗಳೂರು ನಗರದ ಹಲವು ಭಾಗಕ್ಕೆ ಅರ್ಕಾವತಿ ನದಿ ನೀರನ್ನು ಹೆಸರಘಟ್ಟ ಕೆರೆ ಮೂಲಕ ಪೂರೈಕೆ ಮಾಡಲಾಗಿತ್ತು. ನಂತರ ಪಂಪ್ ಸ್ಟೇಷನ್ ಶಿಥಿಲಾವಸ್ಥೆ ತಲುಪಿತ್ತು. ಈಗ ಜಲಮಂಡಳಿ ಸೋಲದೇವನಹಳ್ಳಿಯ ಪಂಪಿಂಗ್ ಸ್ಟೇಷನ್ ಅನ್ನು ಪುನಶ್ಚೇತನ ಮಾಡಿ ಹೆಸರಘಟ್ಟದ ಕೆರೆ ನೀರನ್ನು ಸಂಸ್ಕರಿಸಿ ಬೆಂಗಳೂರಿನ 110 ಹಳ್ಳಿಗಳು ಸೇರಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೂ ನೀರಿನ ಭಾಗ್ಯ ನೀಡೋದಕ್ಕೆ ಮುಂದಾಗಿದೆ.

ಇನ್ನು ನಗರಕ್ಕೆ ನೀರು ಹರಿಸಲು ಸದ್ಯ ಹೆಸರಘಟ್ಟ ಕೆರೆಯಲ್ಲಿ ಸುಮಾರು 1.3 ಟಿಎಂಸಿ ಯಷ್ಟು ನೀರು ಲಭ್ಯವಿದೆ. ಇದಕ್ಕೆ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ನಲ್ಲಿ ಸಂಸ್ಕರಣೆ ಮಾಡಿ, ಎಂ.ಇ.ಐ ಲೇಔಟ್‌ನಲ್ಲಿರುವ ಜಲಸಂಗ್ರಾಹಾರಕ್ಕೆ ಪಂಪ್‌ ಮಾಡಲಾಗುವುದು. ಇಲ್ಲಿನಿಂದ ಅಗತ್ಯವಿರುವಂತಹ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ಹಾಗೂ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುವುದು ಇದರ ಉದ್ದೇಶವಾಗಿದೆ. ಸದ್ಯ ಇತರೆ ಕೆಲಸ ಕಾರ್ಯಗಳಿಗೆ ಮೊದಲ ಹಂತದಲ್ಲಿ ನೀರು ನೀಡಲಾಗುತ್ತೆ. ನಂತರ ನೀರಿನು ಲ್ಯಾಬ್ ಟೆಸ್ಟ್ ಗೆ ಕಳುಹಿಸಿ ವರದಿ ಬಂದ ನಂತರ ಕೂಡಿಯೋದಕ್ಕೂ ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ಓದಿ | Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

ಇನ್ನು ಮುಂದಿನ ವಾರದೋಳಗೆ ಸಿದ್ಧತೆ ಪೂರ್ಣಗೊಳಿಸಲು ಸೂಚಿಸಿದ್ದು, ಇದಕ್ಕೆ ಬೇಕಾದ ಅಗತ್ಯ ತಯಾರಿಗಳನ್ನು ಅಧಿಕಾರಿಗಳು ಮಾಡಿಕೊಳ್ಳುತ್ತಾ ಇದ್ದಾರೆ. ಈಗಾಗಿ ಏಪ್ರಿಲ್ 20 ಬಳಿಕ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ನಿಂದ ನೀರು ಪೂರೈಕೆ ಆಗಲಿದ್ದು, ಇದ್ದು ನಗರದ ಯಾವೆಲ್ಲ ಏರಿಯಾಗಳಿಗೆ ನೀರು ಪೂರೈಕೆ ಆಗಲಿದೆ ಕಾದು ನೋಡಬೇಕಿದೆ.

Exit mobile version