ಸಾಗರ: ಇಲ್ಲಿನ ನಗರ ವ್ಯಾಪ್ತಿಯಲ್ಲಿ ನಗರಸಭೆ ನಲ್ಲಿಯಲ್ಲಿ ಕಳೆದ ಆರೇಳು ದಿನಗಳಿಂದ ನೀರು ಬಾರದೇ (Water Crisis) ಸಾರ್ವಜನಿಕರು ಪರದಾಡುವಂತೆ ಆಗಿದೆ.
ಜಾಕ್ವೆಲ್ ರಿಪೇರಿ ಇರುವ ಕಾರಣ ನೀರು ವಿತರಿಸಲು ಆಗುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ವರ್ಷಕ್ಕೆ ಮೂರು-ನಾಲ್ಕು ಭಾರಿ ರಿಪೇರಿಗೆ ಬರುವ ಜಾಕ್ವೆಲ್‌ನಿಂದಾಗಿ ಜನ ಬೇಸತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಬೇಕಾದ ನಗರಸಭೆ ಸದಸ್ಯರು, ಅಧಿಕಾರಿಗಳು ಕರೆ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾಗರದ 13ನೇ ವಾರ್ಡಿನ ನಗರಸಭೆ ಸದಸ್ಯೆ ಭಾವನ ಸಂತೋಷ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡ್ ನಾಗರಿಕರು ಬೀದಿಯಲ್ಲಿ ಖಾಲಿ ಕೊಡ, ಡ್ರಮ್ ಇಟ್ಟು ಶುಕ್ರವಾರ (ಜ.೧೩) ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಚಿಂಟೂ ಸಾಗರ್ ಜೋಸೆಫ್ ನಗರದ ನಿವಾಸಿಗಳಾದ ಸತೀಶ್ ಕುಮಾರ್, ಕುಮಾರ್ ಶೆಟ್ಟಿ, ಸೌಮ್ಯ, ಸೆಲ್ವಿ ಗೋಮ್ಸ್, ರೂಪಾ, ಮಂಜುಳಾ, ರಾಹುಲ್ ಸಾಗರ್ ಮುಂತಾದವರು ಇದ್ದರು.
ಇದನ್ನೂ ಓದಿ | Karnataka Election : ನಾನು ಎರಡು ಕಡೆ ಸ್ಪರ್ಧೆ ಮಾಡಲ್ಲ, ಒಂದೇ ಕಡೆ ನಿಲ್ಲೋದು: ಸಿದ್ದರಾಮಯ್ಯ ಸ್ಪಷ್ಟನೆ