ಬೆಂಗಳೂರು: ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣ ನೀರು ವ್ಯರ್ಥವಾದ (Water leakage) ಪ್ರಕರಣ ಬೆಳಕಿಗೆ ಬಂದಿದೆ. ಯಶವಂತಪುರ ಎಂಇಐ ಬಸ್ ನಿಲ್ದಾಣದ ಸಮೀಪ ಪೈಪ್ ಒಡೆದಿದ್ದು ಪರಿಣಾಮ ಸುಮಾರು 8 ರಿಂದ 10 ಅಡಿ ಎತ್ತರದಲ್ಲಿ ನೀರು ಚಿಮ್ಮಿ, ಕೃತಕ ಫಾಲ್ಸ್ ಸೃಷ್ಟಿ ಆಗಿತ್ತು.
ಕಾವೇರಿ ಪೈಪ್ ಲೈನ್ ಕನೆಕ್ಷನ್ ಬಳಿ ವಾಲ್ ಹಾಳಾಗಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೀರು ಪೋಲಾಗಿದೆ. ರಸ್ತೆಯಲ್ಲಿ ಮಿನಿ ಫಾಲ್ಸ್ ನಿರ್ಮಾಣ ಆಗಿದ್ದು, ವಾಹನ ಸವಾರರು ಪೋಲಾಗುತ್ತಿದ್ದ ನೀರಲ್ಲಿ ಬಸ್, ಕಾರು ತೊಳೆಯುತ್ತಿದ್ದ ದೃಶ್ಯ ಕಂಡು ಬಂತು. ಮತ್ತೊಂದು ಕಡೆ ರಸ್ತೆ ಪೂರ್ತಿ ನೀರು ಚಿಮ್ಮುತ್ತಿದ್ದ ಕಾರಣ ಬೈಕ್ ಸವಾರರು ಹೋಗಲು ಆಗದೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಯಿತು. ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಯಿತು.
ವಿಷಯ ತಿಳಿದು ಸ್ಥಳಕ್ಕಾಮಿಸಿದ ಜಲಮಂಡಳಿಯ ವಾಟರ್ ಮ್ಯಾನ್ ಒಡೆದಿರವ ಪೈಪ್ ಮೇಲೆ ಕಲ್ಲಿಟ್ಟು ಪೋಲಾಗುತ್ತಿದ್ದ ನೀರನ್ನು ನಿಯಂತ್ರಿಸಿದ್ದಾರೆ. ಒಂದು ಕಡೆ ಕಾವೇರಿ ನೀರಿನಲ್ಲಿ ವ್ಯತ್ಯಯ ಎಂದು ಜಲಮಂಡಳಿ ಪ್ರಕಟಣೆ ಹೊರಡಿಸಿದೆ. ಮತ್ತೊಂದು ಕಡೆ ನೀರು ಪೋಲಾಗುತ್ತಿದ್ದರೂ ಕ್ಯಾರೆ ಎನ್ನದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ