Site icon Vistara News

Water Supply Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾವೇರಿ ನೀರು ಪೂರೈಕೆಯಿಲ್ಲ!

Water Supply Cut

ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆಯ (Cauvery water) 5ನೇ ಹಂತದ ಅನುಷ್ಠಾನದ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ವಿವಿಧ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ನಗರದ ಬಹುತೇಕ ಕಡೆ ಜೂನ್‌ 6 ಮತ್ತು 7ರಂದು ಕಾವೇರಿ ನೀರಿನ (Water Supply Cut) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಬೆಂಗಳೂರು ಜಲಮಂಡಳಿ ಸುತ್ತೋಲೆ ಹೊರಡಿಸಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ 1, 2 ಮತ್ತು 3 ನೇ ಹಂತಗಳ ನೀರು ಸರಬರಾಜು ಘಟಕಗಳನ್ನು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹಾಗೂ ಕಾವೇರಿ ನಾಲ್ಕನೇ ಹಂತ, 1 ಮತ್ತು 2ನೇ ಹಂತ ನೀರು ಸರಬರಾಜು ಘಟಕಗಳನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಜೂನ್ 6 ಮತ್ತು ಜೂನ್ 7ರಂದು ಎರಡು ದಿನಗಳ ಕಾಲ ಬೆಂಗಳೂರು ನೀರು ನಗರದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ | Rain News: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು; ಜೂನ್‌ 13ರವರೆಗೆ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ!

ಈ ಮೊದಲು ಜೂನ್ 4 ರಂದು ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆಸಲಾಗಿತ್ತು, ಆದರೆ ಕಾರಣಾಂತರಗಳಿಂದ ಇದನ್ನು ಜೂನ್ 6ಕ್ಕೆ ಮುಂದೂಡಲಾಗಿದೆ. ಹೀಗಾಗಿ ಜೂನ್ 6 ಮತ್ತು 7ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಜಲಮಂಡಳಿ ಮಂಡಳಿ ಕೋರಿದೆ.

ನಾಳೆಯಿಂದ ದೇಶಾದ್ಯಂತ ಕೆಲ ರೈಲುಗಳ ಸಂಚಾರದಲ್ಲಿ ಮಾರ್ಗ, ಸಮಯ ಬದಲಾವಣೆ

ಬೆಂಗಳೂರು: ಸೇಲಂ ವಿಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವುದರಿಂದ ಕೆಲ ರೈಲುಗಳ ಮಾರ್ಗ ಬದಲಾವಣೆ (Train services) ಮಾಡಲು ದಕ್ಷಿಣ ರೈಲ್ವೆಯು ಸೂಚಿಸಿದೆ. ಹೀಗಾಗಿ ಜೂನ್ 05, 06 ಮತ್ತು 13 ರಂದು ಎರ್ನಾಕುಲಂನಿಂದ ಹೊರಡುವ ರೈಲು (ರೈಲು ಸಂಖ್ಯೆ 12678) ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.

ಇನ್ನೂ ಜೂನ್ 05, 06 ಮತ್ತು 13 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.

ಜೂನ್ 05, 12 ಮತ್ತು 19 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಚರಿಸುವ ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 20 ನಿಮಿಷ ನಿಯಂತ್ರಿಸಲಾಗುತ್ತದೆ.

ಇದನ್ನೂ ಓದಿ: NEET UG Results 2024: ನೀಟ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಹೀಗೆ ಮಾಡಿ

ರೈಲುಗಳ ಮರು ವೇಳಾಪಟ್ಟಿ:

ಕನ ಸೊಲಿಮ್ – ಮಜೊರ್ಡಾ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ರೈಲುಗಳನ್ನು ಮರು ನಿಗದಿಪಡಿಸಲಾಗುವುದು.

1.ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದೀನ್ ಎಕ್‌ಪ್ರೆಸ್‌ ಜೂನ್ 10ರಂದು ವಾಸ್ಕೋ-ಡ-ಗಾಮಾದಿಂದ 2 ಗಂಟೆ (120 ನಿಮಿಷ) ತಡವಾಗಿ ಹೊರಡಲಿದೆ.

2.ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌಸ್‌ನಗರ ಎಕ್ಸ್ ಪ್ರೆಸ್ ಜೂನ್ 09ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ವಾಸ್ಕೋ-ಡ-ಗಾಮಾದಲ್ಲಿ 1 ಗಂಟೆ 30 ನಿಮಿಷ (90 ನಿಮಿಷಗಳ) ತಡವಾಗಿ ಹೊರಡಲಿದೆ. ಜತೆಗೆ ಮಾರ್ಗದಲ್ಲಿ 1 ಗಂಟೆ 45 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version