ಬೆಂಗಳೂರು: ಬೆಂಗಳೂರಿನ ಹಲವೆಡೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ (Water Crisis) ಉಂಟಾಗಲಿದೆ. ಫೆ.27ರ ಬೆಳಗ್ಗೆ 6 ಗಂಟೆಯಿಂದ 28ರ ಬೆಳಗ್ಗೆ 6 ಗಂಟೆವರೆಗೂ ನೀರು ಪೂರೈಕೆಯಲ್ಲಿ (Water supply) ವ್ಯತ್ಯಯವಾಗಲಿದೆ.
ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ಯುಎಫ್‌ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರ ಸಲುವಾಗಿ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ನಗರದ ಹಲವೆಡೆ ನೀರು ಪೂರೈಕೆ ಸ್ಥಗಿತವಾಗಲಿದೆ. ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಪ್ರಕಟಣೆ ಹೊರಡಿಸಿದ್ದು, ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಇದನ್ನೂ ಓದಿ: Wolf attack : ಕಲಬುರಗಿಯಲ್ಲಿ ತೋಳ ದಾಳಿ; ಓರ್ವನ ಸ್ಥಿತಿ ಗಂಭೀರ, 7 ಮಂದಿಗೆ ಗಾಯ
ಯಾವ್ಯಾವ ಏರಿಯಾದಲ್ಲಿ ನೀರಿನ ಸಮಸ್ಯೆ?
4ನೇ ಬ್ಲಾಕ್ ನಂದಿನಿ ಲೇಔಟ್, ಬಿ.ಹೆಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ ಮತ್ತು ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ ಹಾಗೂ ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೇ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಯಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ಬಿಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿಪಾಳ್ಯದಲ್ಲಿ ನೀರಿನ ಸಮಸ್ಯೆ ಆಗಲಿದೆ.
ಜತೆಗೆ ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ, ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಳಗುಂಟೆ ಸೇರಿದಂತೆ ದಾಸರಹಳ್ಳಿ, ಜಾಲಹಳ್ಳಿ, ಹೆಚ್.ಎಂ.ಟಿ, ಚೊಕ್ಕಸಂದ್ರ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕುಡಿಯುವ ನೀರು ಬರುವುದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ