ಬಳ್ಳಾರಿ: ʼಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ. ಮಳಲಿ ಮಸೀದಿಯ ಒಂದು ಹಿಡಿ ಮಣ್ಣೂ ಮುಟ್ಟಲು ಬಿಡುವುದಿಲ್ಲʼ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸವಾಲು ಹಾಕಿದ್ದಾರೆ.
ಮಂಗಳೂರು ನಗರದ ಹೊರವಲಯದ ಕಣ್ಣೂರು ಮೈದಾನದಲ್ಲಿ ನಡೆದ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಮಜೀದ್, ನಿಮ್ಮ ಗುರು ಬೊಮ್ಮಾಯಿ ಯೂಸುಫ್ ಅಲಿ ಜೊತೆ ₹2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಾಚಿಕೆಯಾಗಲ್ವಾ ಎಂದು ಲೇವಡಿ ಮಾಡಿದ್ದರು.
ಇದನ್ನೂ ಓದಿ | ರೆಡ್ಡಿ ಸಮಾಜಕ್ಕಿದೆ ಸರ್ಕಾರ ಬದಲಿಸುವ ಶಕ್ತಿ: ಜನಾರ್ದನ ರೆಡ್ಡಿ ಹೇಳಿಕೆ
2006ರ ಸೆಪ್ಟೆಂಬರ್ 3ರಂದು ಬಳ್ಳಾರಿಯ ಸಂಡೂರಿನಲ್ಲಿ 200 ವರ್ಷದ ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್ ಇಟ್ಟು ಒಡೆದು ಹಾಕಿ ದೇವಿಯ ವಿಗ್ರಹ ನಾಶ ಮಾಡಿದ್ದು ನಿಮ್ಮದೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ. ಈಗ ನಿಮಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ, ರೆಡ್ಡಿ ಮನೆಗೆ ಪಾದಾಯಾತ್ರೆ ಮಾಡಿ.
ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಬೆತ್ತಲೆ ಪ್ರಪಂಚ ಪುಸ್ತಕದಲ್ಲಿ ಬರೆದಿದ್ದಾರೆ. ಒಂದು ನೆನಪಿಡಿ. ಮಳಲಿ ಮಸೀದಿಯ ಜಾಗದ ಒಂದು ಹಿಡಿ ಮರಳು ನಿಮಗೆ ಸಿಗಲಿಕ್ಕಿಲ್ಲ. ಆರ್‌ಎಸ್‌ಎಸ್ ಆಟಾಟೋಪಕ್ಕೆ ಕಾಂಗ್ರೆಸ್-ಜೆಡಿಎಸ್ ಬೆದರಬಹುದು. ನಿಮ್ಮ ಆಟಕ್ಕೆ ಬೆದರುವ ಮಕ್ಕಳು ನಾವಲ್ಲ ಎಂದು ಸಂಘ ಪರಿವಾರಕ್ಕೆ ಸವಾಲೆಸಿದ್ದಾರೆ.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿ, ಮಳಲಿಯ ಸಂಪೂರ್ಣ ದೇವಸ್ಥಾನ ಪಡೆದೇ ಪಡೆಯುತ್ತೇವೆ. ಅದೂ ಕಾನೂನಿನ ಪ್ರಕಾರವೇ ಪಡೆಯುತ್ತೇವೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದಯತೆ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಾಸ್ ಕೊಡಿ. ಇದು ಯಾರ ಅಪ್ಪನ ಸ್ವತ್ತಲ್ಲ. ತಾಂಬೂಲ ಪ್ರಶ್ನೆ ಮತ್ತು ಅಷ್ಟಮಂಗಲ ಎರಡೂ ವೈಜ್ಞಾನಿಕ. ಹಗುರವಾಗಿ ಮಾತನಾಡಿದ ನಾಲಿಗೆಯನ್ನು ಸೀಳಿ ಬೀಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ | ಅದಿರು ಉತ್ಪಾದನೆಗೆ ಮೂಗುದಾರ, ಏಕಸ್ವಾಮ್ಯಕ್ಕೆ ಕಡಿವಾಣ