Site icon Vistara News

Weather Report : ಭಾರಿ ಮಳೆಗೆ ಬಿರುಗಾಳಿ ಸಾಥ್‌; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

women enjoying rain in road

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು, ಒಳನಾಡಲ್ಲಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಜತೆಗೆ ವಾಯವ್ಯ ಭಾಗದಿಂದ ಗಾಳಿ ಬೀಸುತ್ತಿರುವ ಪ್ರಭಾವದಿಂದಾಗಿ ರಾಜ್ಯದಲ್ಲಿ (weather report) ಮಳೆಯಾಗುತ್ತಿದೆ. ರಾಜ್ಯದಲ್ಲಿ ಮುಂದಿನ ದಿನವು ಮಳೆ (Rain News) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ. ಮುಂದಿನ 24 ಗಂಟೆಯಲ್ಲಿ ಒಳನಾಡಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಜತೆಗೆ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ. ಪ್ರವಾಸಿಗರು ಸುರಕ್ಷಿತವಾಗಿ ಇರುವಂತೆ ಎಚ್ಚರಿಸಲಾಗಿದೆ.

ಬೆಂಗಳೂರಲ್ಲಿ ಲಘು ಮಳೆ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮುಂಜಾನೆ ಬಿಸಿಲು ಇದ್ದರೆ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಲಘು ಮಳೆಯ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ನೆಲ ಗಾಳಿಯು ಬೀಸಲಿದೆ.

ಇದನ್ನೂ ಓದಿ: Cm Siddaramaiah : ಆ ಪತ್ರ ಓದಿದಾಗಿನಿಂದ ಈ ಮಗುವನ್ನು ಭೇಟಿ ಆಗ್ಬೇಕು ಎಂದು ಬಯಸಿದ್ದೆ, ಇವತ್ತು ಸಿಕ್ಳು; ಭಾವುಕರಾದ ಸಿದ್ದರಾಮಯ್ಯ

ಕರಾವಳಿಯಲ್ಲಿ ಚುರುಕಾಗಿರುವ ಮುಂಗಾರು

ನೈರುತ್ಯ ಮುಂಗಾರು ಶುಕ್ರವಾರ ಕರಾವಳಿಯಲ್ಲಿ ಚುರುಕುಗೊಂಡಿತ್ತು. ಉತ್ತರ ಒಳನಾಡಲ್ಲಿ ದುರ್ಬಲಗೊಂಡಿದ್ದರೆ, ದಕ್ಷಿಣ ಒಳನಾಡಲ್ಲಿ ಸಾಮಾನ್ಯವಾಗಿತ್ತು. ಕೋಟ 6 ಹಾಗೂ ಶಿರಾಲಿ, ಕ್ಯಾಸಲ್ ರಾಕ್ ತಲಾ 5 ಸೆಂ.ಮೀ ಮಳೆಯಾಗಿದೆ. ಸುಳ್ಯ, ಭಾಗಮಂಡಲ, ಪೊನ್ನಂಪೇಟೆ ಪಿಡಬ್ಲ್ಯುಡಿ ತಲಾ 4 ಸೆಂ.ಮೀ ಹಾಗೂ ಸಿದ್ದಾಪುರ, ಕುಂದಾಪುರ, ಕೊಲ್ಲೂರು, ಪುತ್ತೂರು, ಕಮ್ಮರಡಿ, ನಾಪೋಕ್ಲು ತಲಾ 3ಸೆಂ.ಮಿ ಮಳೆ ಸುರಿದಿದೆ.

ಅಂಕೋಲಾ, ಗೇರ್ಸೊಪ್ಪ, ಕದ್ರಾ, ಮಾಣಿ, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಕಾರ್ಕಳ, ಕಾರವಾರ, ಖಜೂರಿ ಸೇರಿದಂತೆ ಲಿಂಗನಮಕ್ಕಿ ಎಚ್‌ಎಂಎಸ್ , ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಚಿಕೆರೆ, ಗೋಕರ್ಣ, ಕುಮಟಾ, ಜೋಯಿಡಾ, ಹೊನಾವರ, ಮಂಗಳೂರು, ಧರ್ಮಸ್ಥಳ ಉಪ್ಪಿನಂಗಡಿ ಸೇರಿದಂತೆ ಲೋಂಡಾ, ಕಮಲಾಪುರ, ಎನ್ ಆರ್ ಪುರ, ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಮಡಿಕೆರೆ ಸೋಮವಾರಪೇಟೆ, ಸಕಲೇಶಪುರ, ತಾಳಗುಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version