Site icon Vistara News

Weather report : ರಾಜ್ಯಾದ್ಯಂತ ಸೆ.8ರಂದು ಧಾರಾಕಾರ ಮಳೆ; ಮೀನುಗಾರರಿಗೆ ಅಲರ್ಟ್!‌

Girls are standing in beach with umbrealla

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೊಂದು ವಾರ ಮುಂದುವರಿಯಲಿದೆ. ಸೆ.8 ರಂದು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ಮಳೆ (Weather report) ಸುರಿಯಲಿದೆ.

ಭಾರೀ ಮಳೆ ಮುನ್ನೆಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಮುಂದಿನ 48 ಗಂಟೆಯಲ್ಲಿ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭರ್ಜರಿ ಮಳೆಯಾಗಲಿದೆ.

ಹೆಚ್ಚಿದ ಬಿರುಗಾಳಿ ವೇಗ

ಮುಂದಿನ 48 ಗಂಟೆಯಲ್ಲಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಬಿಸಿಲಿನಿಂದ ಕೂಡಿದರೆ, ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆ ಒಂದೆರಡು ಸಲ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Murder Case : ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ

ಕರಾವಳಿಯಲ್ಲಿ ದುರ್ಬಲ, ಒಳನಾಡಲ್ಲಿ ಸಕ್ರಿಯ

ನೈರುತ್ಯ ಮುಂಗಾರು ಬುಧವಾರದಂದು ಕರಾವಳಿಯಲ್ಲಿ ದುರ್ಬಲವಾಗಿದ್ದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದೆ. ನಾಪೋಕ್ಲು (ಕೊಡಗು ಜಿಲ್ಲೆ ) 8; ಬೆಳ್ಳೂರು (ಮಂಡ್ಯ ಜಿಲ್ಲೆ ) 7 ಸೆಂ.ಮೀ ಮಳೆಯಾಗಿದೆ. ಬೀದರ್, ಕೊಟ್ಟಿಗೆಹಾರದಲ್ಲಿ ತಲಾ 6, ಬೀದರ್ ಪಿಟಿಒ, ಮೂರ್ನಾಡು ತಲಾ 5 ಹಾಗೂ ಗೋಣೀಕೊಪ್ಪಲ್ ಕೆವಿಕೆ 4 ಸೆಂ.ಮೀ ಮಳೆಯಾಗಿದೆ.

ಕೊಲ್ಲೂರು, ಮುಡಬಿ , ಭಾಗಮಂಡಲ ತಲಾ 3 ಸೆಂ,ಮೀ, ಧರ್ಮಸ್ಥಳ , ಸಿದ್ದಾಪುರ, ಶಿರಾಲಿ, ಕುಮಟಾ, ಭಾಲ್ಕಿ, ನಿರ್ಣಾ, ಚಿಂಚೋಳಿ, ಪೊನ್ನಂಪೇಟೆ, ಸೋಮವಾರಪೇಟೆ, ದೇವನಹಳ್ಳಿ, ಗುಬ್ಬಿ, ಕೋನೇಹಳ್ಳಿ ಕೆವಿಕೆ ತಲಾ 2 ಸೆಂ.ಮೀ ಮಳೆಯಾಗಿದೆ. ಉಪ್ಪಿನಂಗಡಿ , ಅಂಕೋಲಾ, ಹುಮನಾಬಾದ್, ಮಂಠಾಳ, ಕಮಲಾಪುರ, ಸೇಡಂ, ತಾಳಗುಪ್ಪ, ಮಂಡಗದ್ದೆ ಹಾಗೂ ಕಮ್ಮರಡಿ, ಮೂಡಿಗೆರೆ ಕೆವಿಕೆ, ಬೇಲೂರು , ಸಾಲಿಗ್ರಾಮ ಸೇರಿದಂತೆ ರಾಯಲಪಾಡು, ಉತ್ತರಹಳ್ಳಿ, ದೊಡ್ಡಬಳ್ಳಾಪುರ, ತಿಪಟೂರು, ಕುಣಿಗಲ್, ಹೆಬ್ಬೂರು, ರಾಮನಗರ, ಚನ್ನಪಟ್ಟಣದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version