ಬೆಂಗಳೂರು: ಭಾನುವಾರ ರಾಜ್ಯದ ವಿವಿಧೆಡೆ ವರುಣನ (Karnataka Rain) ಅಬ್ಬರ ಜೋರಾಗಿತ್ತು. ಬೆಂಗಳೂರಲ್ಲಿ ಮಧ್ಯಾಹ್ನದ ಹೊತ್ತಿಗೆ ಕತ್ತಲು ಕವಿದು, ಆಲಿಕಲ್ಲು, ಬಿರುಗಾಳಿ ಸಹಿತ (Rain Update) ಮಳೆಯಾಗಿದೆ. ಧಾರಾಕಾರ ಮಳೆಯು ಹಲವು ಅನಾಹುತಗಳನ್ನೇ ಸೃಷ್ಟಿ ಮಾಡಿದೆ. ಕೆಲವೆಡೆ ಮರಗಳು ಧರೆಗುರುಳಿದರೆ, ಹಲವು ಕಡೆ ರಸ್ತೆಗಳೆಲ್ಲವೂ ಜಲಾವೃತವಾಗಿತ್ತು. ಇನ್ನು ಕೆಆರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಅಡಿ ಕಾರಿನೊಳಗೆ ಆರು ಜನ ಸಿಲುಕಿಕೊಂಡಿದ್ದರು. ಇವರಲ್ಲಿ ಐವರು ಅಪಾಯದಿಂದ ಪಾರಾಗಿದ್ದರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ.
ನಗರದ ಕೆಆರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಜಲಾವೃತಗೊಂಡಿತ್ತು. ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಆರು ಮಂದಿ ಅಂಡರ್‌ಪಾಸ್ ನಡಿ ಸಿಲುಕಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ಸಿಲುಕಿದವರನ್ನು ರಕ್ಷಣೆ ಮಾಡಿದರು. ಇದರಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಮರ
ಪ್ರಯಾಣಿಕರುನ್ನು ಹೊತ್ತೊಯ್ಯುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಮರವೊಂದು ಬಿದ್ದಿದೆ. ಈ ಘಟನೆ ವಿಜಯನಗರ ಬಳಿ ನಡೆದಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಬಸ್ ಮುಂಭಾಗವೇ ಮರ ಬಿದ್ದ ಕಾರಣದಿಂದ ಚಾಲಕ ಸೇರಿ ಪ್ರಯಾಣಿಕರೆಲ್ಲವೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿ ಕಾರು ಮತ್ತು ಬೈಕ್ ಮೇಲೆ ಬೃಹದಾಕಾರದ ಮರ ಬಿದ್ದು, ಜಖಂಗೊಂಡಿದೆ. ಮಂಜುನಾಥ ನಗರದಲ್ಲಿ ಮನೆಯೊಂದರ ಮೇಲೆ ಬಿದ್ದಿದೆ.
ಇತ್ತ ಶೇಷಾದ್ರಿಪುರ ಬಳಿಯ ಶಿವಾನಂದ ವೃತ್ತ ಸಂಪೂರ್ಣ ಜಲಾವೃತಗೊಂಡಿತ್ತು. ಅಂಡರ್‌ಪಾಸ್ ಕೆಳಗೆ ವಾಹನಗಳು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿ, ಕಾರುಗಳು ಕೂಡ ಒನ್ ವೇನಲ್ಲಿ ವಾಪಸ್ ಆಗಿವೆ. ವಾಹನಗಳು ಮುಳುಗಡೆಯಾಗುವ ಮುಟ್ಟಕ್ಕೆ 3-4 ಅಡಿಗೂ ಹೆಚ್ಚು ನೀರು ನಿಂತಿದೆ.
ಅಂಡರ್‌ಪಾಸ್‌ನಲ್ಲಿ ಸಿಲುಕಿ ಮಹಿಳೆಯರ ಗೋಳಾಟ; ವಿಡಿಯೊ ಇಲ್ಲಿದೆ
ಹಸಿರು ರಸ್ತೆಯಂತಾದ ಪ್ಯಾಲೇಸ್ ಗುಟ್ಟಳ್ಳಿ
ಪ್ಯಾಲೇಸ್ ಗುಟ್ಟಳ್ಳಿಯಲ್ಲಿ ಕಾಂಕ್ರಿಟ್ ರಸ್ತೆಯು ಮುಚ್ಚಿ ಹೋಗಿ ಹಸಿರು ರಸ್ತೆಯಂತೆ ನಿರ್ಮಾಣವಾಗಿತ್ತು. ಭಾರಿ ಮಳೆಗೆ ಮರದ ಎಲೆಗಳೆವೂ ಉದುರಿ, ರಸ್ತೆ ತುಂಬಾ ಹರಡಿದ್ದವು.
ಬೆಂಗಳೂರಿನಲ್ಲಿ ಭೀಕರ ಮಳೆ; ವಿಡಿಯೊ ಇಲ್ಲಿದೆ
ಇದನ್ನೂ ಓದಿ: IPL 2023 : ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಕೊಡುಗೆ ನೀಡಿದ ಅಭಿಮಾನಿ, ಏನದು?
ಅಂಡರ್‌ಪಾಸ್‌ನಲ್ಲಿ ಈಜಿದ ಪೊಲೀಸ್; ವಿಡಿಯೊ ಇಲ್ಲಿದೆ
ಕೋಲಾರದಲ್ಲೂ ಅಬ್ಬರಿಸಿದ ವರುಣ
ಕೋಲಾರದಲ್ಲಿ ಸತತ ಒಂದು ಗಂಟೆ ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿ, ಮಳೆಗೆ ಬೃಹತ್ ಮರ ಉರುಳಿದವು. ಕೋಲಾರ ಚಿಕ್ಕಬಳ್ಳಾಪುರ ಮಾರ್ಗದ ಧನ್ಮಟ್ನಹಳ್ಳಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದಿದೆ. ಪರಿಣಾಮ ಒಂದು ಗಂಟೆ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಮಳೆ ತೀವ್ರತೆ ಕಡಿಮೆ ಆದ ಬಳಿಕ ಗ್ರಾಮಸ್ಥರು ಮರವನ್ನು ತೆರವುಗೊಳಿಸಿದರು. ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ