Site icon Vistara News

Weather Report : ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್‌

beach view

ಬೆಂಗಳೂರು: ರಾಜ್ಯದ ಹಲವೆಡೆ ಮಳೆ (Rain News) ಅಬ್ಬರ ಮುಂದುವರಿದಿದೆ. ಸೆ.11ರಂದು ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.

ಬಿರುಗಾಳಿಯ ಮುನ್ನೆಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀಯಿಂದ 55 ಕಿಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರಿನ ಅಲ್ಲಲ್ಲಿ ಮಳೆ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಅಲ್ಲಲ್ಲಿ ಮಳೆಯಾಗಬಹುದು. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಭಾರಿ ಮಳೆಗೆ ರಸ್ತೆ ಸಂಪರ್ಕವೇ ಕಡಿತ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಸಮೀಪ ನಿರಂತರ ಮಳೆಯಿಂದ ರಸ್ತೆಯೇ ಕೊಚ್ಚಿ ಹೋಗಿದೆ. ಪರಿಣಾಮ ಮರಕಲ್ -ಕೊಳ್ಳುರು ಎಂ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಗೆ ಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳಕ್ಕೆ ಅಡ್ಡಲಾಗಿ ಈಗಾಗಲೇ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಮಳೆಗೆ ಸತತ ಎರಡನೇ ಬಾರಿಯೂ ರಸ್ತೆ ಕೊಚ್ಚಿ ಹೋಗಿದೆ. ಮರಕಲ್ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳು ಮೈಕ್ ಮೂಲಕ ಹಳ್ಳದ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: Kidnap Case : ಮಾತಾಡೋಕೆ ಕರೆಸಿಕೊಂಡು ಎತ್ಹಾಕ್ಕೊಂಡು ಹೋದ ಫ್ರೆಂಡ್ಸ್‌!

ಕರಾವಳಿಯಲ್ಲಿ ವ್ಯಾಪಕ ಮಳೆ

ನೈರುತ್ಯ ಮುಂಗಾರು ಶನಿವಾರ ರಾಜ್ಯಾದ್ಯಂತ ಸಾಮಾನ್ಯವಾಗಿತ್ತು. ಕರಾವಳಿಯಲ್ಲಿ ವ್ಯಾಪಕವಾಗಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಸುಳ್ಯ, ಭಾಗಮಂಡಲದಲ್ಲಿ ತಲಾ 5 ಸೆಂ.ಮೀ, ಪಣಂಬೂರು, ಪುತ್ತೂರು, ಕೆಂಭಾವಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಕಾರ್ಕಳ, ಸಿದ್ದಾಪುರ, ಜೇವರ್ಗಿ, ನೆಲೋಗಿ, ಯಡ್ರಾಮಿ, ಶೋರಾಪುರ, ನಾಪೋಕ್ಲು ತಲಾ 3 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ಉಡುಪಿ, ಕೋಟ, ಕುಂದಾಪುರ, ಕುಮಟಾ, ನಿಪ್ಪಾಣಿ, ದೇವರಹಿಪ್ಪರಗಿ, ಚಿಂಚೋಳಿ, ಸುಳೆಪೇಟೆ ಸೇರಿದಂತೆ ಶಹಾಪುರ, ಸೈದಾಪುರ, ಶೃಂಗೇರಿ, ಜಯಪುರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಮಾಣಿ, ಹೊನ್ನಾವರ, ಗೇರುಸೊಪ್ಪಾ, ಗೋಕರ್ಣ, ಕದ್ರಾ , ಗದಗ, ಲೋಂಡಾ , ಕಲಬುರ್ಗಿ, ಕಲಬುರ್ಗಿ ಎಡಬ್ಲ್ಯೂಎಸ್, ಖಜೂರಿ, ಅಫಜಲಪುರ, ಕಮಲಾಪುರ ಹಾಗೂ ದೇವದುರ್ಗ, ಗಬ್ಬೂರು, ವಿರಾಜಪೇಟೆ, ಲಿಂಗನಮಕ್ಕಿ, ತಾಳಗುಪ್ಪ ಸೇರಿದಂತೆ ಕೊಪ್ಪ, ಬಾಳೆಹೊನ್ನೂರು, ಬೇಲೂರು, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version