Site icon Vistara News

Weather Report: ಇಂದೂ ನಡುಗಲಿದೆ ಬೆಂಗಳೂರು; ಕರಾವಳಿಯಲ್ಲೂ ಮುಂದುವರಿಯಲಿದೆ ವರುಣಾರ್ಭಟ

Rain News

Rain News

ಬೆಂಗಳೂರು: ಅಬ್ಬಾಬ.. ಸಾಕಪ್ಪಾ ಸಾಕು ಈ ಮಳೆ ಸಹವಾಸ ಎಂದು ಬೆಂಗಳೂರಿಗರು (Bangalore Rain) ಶಪಿಸಿದ್ದು ಸುಳ್ಳಲ್ಲ. ಭಾನುವಾರ (ಮೇ 21) ಬೆಂಗಳೂರಲ್ಲಿ ಸುರಿದ ರಣಚಂಡಿ ಮಳೆಯು ಜನರನ್ನು ನಡುಗಿಸಿದ್ದಂತೂ ಸತ್ಯ. ರಾಜ್ಯದ ಹಲವೆಡೆ ಮೇ 22ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿ, ವಿಜಯನಗರ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ ಮತ್ತು ರಾಯಚೂರಲ್ಲಿ ವ್ಯಾಪಕ ಮಳೆಯಾಗಲಿದೆ. ಕೊಡಗು ಮತ್ತು ಹಾಸನ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೆಂಗಳೂರಲ್ಲಿ ಎಲ್ಲಿಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ನಂದಿನಿ ಲೇಔಟ್ – 48 ಮಿಮೀ
ಪುಲಕೇಶಿ ನಗರ – 44 ಮಿಮೀ
ರಾಜಾಜಿನಗರ – 37 ಮಿಮೀ
ಕುಶಾಲ್ ನಗರ – 35 ಮಿಮೀ
ವಿದ್ಯಾರಣ್ಯಪುರ – 25 ಮಿಮೀ
ಕೆ ಆರ್ ಪುರ – 36 ಮಿಮೀ
ಕೊಟ್ಟೆಗಾರಪಾಳ್ಯ – 33 ಮಿಮೀ
ಚಾಮರಾಜಪೇಟೆ – 28 ಮಿಮೀ
ಬಸವನಪುರ -25 ಮಿಮೀ
ನಾಯಂಡಳ್ಳಿ -20 ಮಿಮೀ
ವಿವಿ ಪುರ – 20ಮಿಮೀ
ಆಜನೇಯಪುರ- 19 ಮಿಮೀ
ಆರ್ ಆರ್ ನಗರ -18 ಮಿಮಿ
ಕಾಟನ್‌ಪೇಟೆ- 33 ಮಿಮೀ
ಸಂಪಗಿನಗರ-31ಮಿಮೀ
ವಿಜಯನಗರ- 17 ಮಿಮೀ ಮಳೆಯಾಗಿದೆ.

ಇದನ್ನೂ ಓದಿ: Bangalore Rain: ರಣಮಳೆ ನಡುವೆ ಹುಚ್ಚಾಟ; ರಾಜ ಕಾಲುವೆ ಆಳ ನೋಡಲು ಹೋಗಿ ಕೊಚ್ಚಿಹೋದ ಯುವಕ

ಎಷ್ಟು ಪ್ರಮಾಣದಲ್ಲಿ ಮಳೆಯಾದರೆ ಅಲರ್ಟ್‌ ಘೋಷಣೆ

1) ರೆಡ್ ಅಲರ್ಟ್- ಆಲಿಕಲ್ಲು ಸಹಿತ ಅತಿ ಭಾರಿ ಮಳೆ (204.5 mm ಗೂ ಅಧಿಕ)
2) ಆರೆಂಜ್ ಅಲರ್ಟ್- ಗುಡುಗು, ಮಿಂಚು ಸಹಿತ ಭಾರಿ ಮಳೆ (115 mm ರಿಂದ 204 mm)
3) ಯೆಲ್ಲೋ ಅಲರ್ಟ್- ಗಾಳಿ, ಗುಡುಗು ಸಹಿತ ಭಾರಿ ಮಳೆ (64.5 mm ರಿಂದ 115.5 mm)

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version