Site icon Vistara News

Weather Report: ಇನ್ನೆರಡು ದಿನ ವರುಣಾರ್ಭಟ; ಬೀದರ್‌, ಕಲಬುರಗಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಎಚ್ಚರಿಕೆ

#image_title

ಬೆಂಗಳೂರು: ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಮಳೆಯು (Weather Report) ಅಬ್ಬರಿಸಲಿದೆ. ಕೆಲವೆಡೆ ಬಿರುಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದ್ದರೆ, ಮುಂದಿನ ಎರಡು ದಿನಗಳು ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ (Karnataka Rain) ಆಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ (Weather Updates) ಮುನ್ಸೂಚನೆಯನ್ನು ನೀಡಿದೆ.

ಏಪ್ರಿಲ್‌ 29 ಮತ್ತು 30ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್‌, ಬಳ್ಳಾರಿ, ಧಾರವಾಡ ಹಾಗೂ ಹಾವೇರಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇತ್ತ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಇರಲಿದೆ.

ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ತುಮಕೂರು, ಚಾಮರಾಜನಗರ, ಮೈಸೂರು, ಕೋಲಾರ, ಚಿತ್ರದುರ್ಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಎಲ್ಲೆಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಮುನ್ನೆಚ್ಚರಿಕೆ

ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿಯಲ್ಲಿ ವರುಣ ಅಬ್ಬರಿಸಲಿದ್ದಾನೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು, ಮಿಂಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಇತ್ತ ರಾಜ್ಯದಲ್ಲಿ ಶುಕ್ರವಾರ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಜತೆಗೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಬೀದರ್‌ನ ನಿಟ್ಟೂರುನಲ್ಲಿ 10 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಬೀದರ್‌, ಬೀದರ್‌ ಪಿಟಿಒದಲ್ಲಿ ತಲಾ 9 ಸೆಂ.ಮೀ ಹಾಗೂ ಭಾಲ್ಕಿಯಲ್ಲಿ 8, ಕಲಬುರಗಿ, ಹುಲಸೂರು, ಸೈಗಾವ್‌ನಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ: Wrestlers Protest : ಅಥ್ಲೀಟ್​​ಗಳನ್ನು ರಸ್ತೆಯಲ್ಲಿ ಕಂಡು ಬೇಸರವಾಯ್ತು; ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಚಿನ್ನದ ಹುಡುಗ

ಉಳಿದಂತೆ, ಹುಮನಾಬಾದ್‌, ಹಲಬರ್ಗಾ ತಲಾ 6 ಸೆಂ.ಮೀ, ಔರಾದ್, ಕಮಲಾಪುರ, ಮಹಾಗಾವ್‌ ತಲಾ 5 ಹಾಗೂ ಸುಲೇವೇಟ್, ಫರಹತಾಬಾದ್ ತಲಾ 3, ನಲ್ವತವಾಡ, ಮುದಗಲ್, ಕೂಡಲಸಂಗಮ, ಸೇಡಂ, ನಿಂಬರ್ಗಾ ತಾಂಡಾ, ರಾಜೇಶ್ವರ ತಲಾ 2 ಸೆಂ.ಮೀ ಮಳೆಯಾಗಿದೆ. ಆಲಮಟ್ಟಿ ಎಚ್‌ಎಂಎಸ್, ಬಿ ಬಾಗೇವಾಡಿ, ಸಿಂದಗಿ, ಚಿಕ್ಕೋಡಿ, ನಾರಾಯಣಪುರ ಎಚ್‌ಎಂಎಸ್, ಗಂಗಾವತಿ ಎಆರ್‌ಜಿ, ಗಂಗಾವತಿ, ಚಿಂಚೋಳಿ, ಅಳಂದ, ಗುಂಡಗುರ್ತಿ, ಅಡಕಿ, ಕೆಂಭಾವಿ, ಕಳಸ, ಕೊಟ್ಟೂರು, ಸರಗೂರು, ಮಡಿಕೇರಿ ಎಡಬ್ಲ್ಯೂಎಸ್ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.

Exit mobile version