ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Weather report) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಾದ್ಯಂತ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಅಧಿಕ ಮಳೆ
ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿದ್ದು, ಒಳನಾಡಿನಲ್ಲಿ ದುರ್ಬಲಗೊಂಡಿದೆ. ರಾಜ್ಯದಲ್ಲಿ ಶನಿವಾರದಂದು ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆ ಪ್ರಮಾಣವು ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ) 10 ಸೆಂ.ಮೀ, ಪುತ್ತೂರು ಎಚ್‌ಎಂಎಸ್ (ದಕ್ಷಿಣ ಕನ್ನಡ ಜಿಲ್ಲೆ) 9 ಸೆಂ.ಮೀ ದಾಖಲಾಗಿದೆ. ಉಳಿದಂತೆ ಕುಂದಾಪುರ, ಗೇರುಸೊಪ್ಪ ತಲಾ 6 ಸೆಂ.ಮೀ ಹಾಗೂ ಸಿದ್ದಾಪುರ, ಮಣಿ , ಕದ್ರಾ , ಶೃಂಗೇರಿ ಎಚ್‌ಎಂಎಸ್ ತಲಾ 5 ಸೆಂ.ಮೀ ಮಳೆಯಾಗಿದೆ.
ಇದನ್ನೂ ಓದಿ: Siddapura Mahesha: 13 ವರ್ಷದ ಪ್ರೀತಿಗಾಗಿ ರೌಡಿಸಂ ಬಿಡಲು ಮುಂದಾಗಿದ್ದ ಮಹೇಶ; ಪತ್ನಿಯ ಮಾತೇ ಮುಳುವಾಯ್ತೇ?
ಕೊಲ್ಲೂರು, ಕಾರ್ಕಳ, ಧರ್ಮಸ್ಥಳ, ಸುಳ್ಯ, ಬೆಳ್ತಂಗಡಿ, ಸಿದ್ದಾಪುರ, ಜಯಪುರ ತಲಾ 3 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ , ಕುಮಟಾ, ಬೇಲಿಕೇರಿ, ಗುಂಜಿ , ಕೊಟ್ಟಿಗೆಹಾರ, ಕೊಪ್ಪ, ಕಳಸ, ಲಿಂಗನಮಕ್ಕಿ ಎಚ್‌ಎಂಎಸ್, ತಾಳಗುಪ್ಪದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಚಿಕೆರೆ, ಶಿರಾಲಿ, ಜೋಯಿಡಾ, ಗೋಕರ್ಣ, ಸಿರ್ಸಿ ಪಿಡಬ್ಲ್ಯೂಡಿ, ಮಂಕಿ, ಯಲ್ಲಾಪುರ, ಹೊನಾವರ, ಜಗಲಬೆಟ್ , ಉಡುಪಿ, ಮಂಗಳೂರು, ಉಪ್ಪಿನಂಗಡಿ, ಪಣಂಬೂರು, ಕೋಟ , ಲೊಂಡಾ , ಸೇಡಂ, ಯಡ್ರಾಮಿ ಸೇರಿದಂತೆ ಸೋಮವಾರಪೇಟೆ, ಶನಿವಾರಸಂತೆ, ಬಾಳೆಹೊನ್ನೂರು, ಕಮ್ಮರಡಿ , ತ್ಯಾಗರ್ತಿ, ಮಂಡಗದ್ದೆ , ಹುಂಚದಕಟ್ಟೆ, ಸಕಲೇಶಪುರ ಹಾಗೂ ಚನ್ನಗಿರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 30 ಡಿ.ಸೆ – 23 ಡಿ.ಸೆ
ಗದಗ: 28 ಡಿ.ಸೆ – 21 ಡಿ.ಸೆ
ಚಿತ್ರದುರ್ಗ: 27 ಡಿ.ಸೆ – 21 ಡಿ.ಸೆ
ಬೆಳಗಾವಿ: 27 ಡಿ.ಸೆ – 21 ಡಿ.ಸೆ
ಕಾರವಾರ: 28 ಡಿ.ಸೆ – 25 ಡಿ.ಸೆ
ಮಂಗಳೂರು: 29 ಡಿ.ಸೆ – 24 ಡಿ.ಸೆ
ಹೊನ್ನಾವರ: 29 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 29 ಡಿ.ಸೆ – 20 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ