ಬೆಂಗಳೂರು: ರಾಜ್ಯಾದ್ಯಂತ ಕಳೆದೊಂದು ವಾರದಿಂದ ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ 24 ಗಂಟೆಯಲ್ಲಿ ಹಲವೆಡೆ ಮಳೆಯಾಗುವ (Weather Report) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡುಗು, ಕೋಲಾರ ಹಾಗೂ ಮೈಸೂರು, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಜತೆಗೆ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕೊಪ್ಪಳ, ರಾಯಚೂರಿನ ಕೆಲವು ಭಾಗಗಳಲ್ಲಿ ವರುಣ ಆವರಿಸಲಿದ್ದಾನೆ. ಕರಾವಳಿಯ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉದ್ಯಾನನಗರಿಯಲ್ಲಿ ಸಾರ್ವಕಾಲಿಕ ಮಳೆ ದಾಖಲು
ಬೆಂಗಳೂರು ನಗರದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ವಾರ್ಷಿಕ ಮಳೆಯ ಒಟ್ಟು ಮೊತ್ತ 1709.1 ಮಿ.ಮೀ. ಅಕ್ಟೋಬರ್ 17ರಂದು ದಾಟಿದ್ದು, ಇದು ಹಿಂದಿನ 2017ರ ಸಾರ್ವಕಾಲಿಕ ದಾಖಲೆಯಾದ ವಾರ್ಷಿಕ ಮಳೆಯ ಮೊತ್ತ 1696.0 ಮಿ.ಮೀ. ಅನ್ನು ಮುರಿದಿದೆ. ಇನ್ನು ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 35.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಡಿಮೆ ಉಷ್ಣಾಂಶ ಬಾಗಲಕೋಟೆಯಲ್ಲಿ 18.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇದನ್ನೂ ಓದಿ | Rain news | ಆಕಳನ್ನು ರಕ್ಷಿಸಲು ನೀರಿಗೆ ಜಿಗಿದ ವ್ಯಕ್ತಿ; ಆಕಳು ನೀರುಪಾಲು, ವ್ಯಕ್ತಿ ಪಾರು