ನವದೆಹಲಿ: ವಿಮಾನದಲ್ಲಿ ಪ್ರಯಾಣಿಸಬೇಕಾದರೆ, ಅನುಮತಿಸಲಾದ ತೂಕದಷ್ಟೇ ಲಗ್ಗೇಜ್ (Luggage Weight) ಇರಬೇಕಾಗುತ್ತದೆ. ಒಂದು ವೇಳೆ ತೂಕ ಹೆಚ್ಚಾದರೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯೊಂದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಕಳೆದ ವಾರ ಸಂಭವಿಸಿದೆ. ಬೆಂಗಳೂರಿಂದ (Bengaluru) ದಿಲ್ಲಿಗೆ (Delhi) ಹೊರಟಿದ್ದ ಮಹಿಳೆಯೊಬ್ಬಳ ಲಗೇಜ್, ಅನುಮತಿಸಲಾದ ತೂಕಕ್ಕಿಂತ ಕೇವಲ 100 ಗ್ರಾಮ್‌ವಷ್ಟೇ ಹೆಚ್ಚಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿನ ಆಟೋಮೆಟೇಟ್ ಬ್ಯಾಗೇಜ್, ಆಕೆಯ ಲಗೇಜ್ ಅನ್ನು ಸ್ವೀಕರಿಸಲಿಲ್ಲ!
ಕನ್ವೋಕೇಷನ್‌ನಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಗ್ರಾಫಿಕ್ ಡಿಸೈನರ್‌ವೊಬ್ಬರು ಬೆಂಗಳೂರು ಆಗಮಿಸಿದ್ದರು. ತಮ್ಮ ಕಾರ್ಯಕ್ರಮ ಮುಗಿದ ಹಿನ್ನೆಲೆಯಲ್ಲಿ ಆಕೆ ಕಳೆದ ವಾರ ದಿಲ್ಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಆಕೆಯ ಲಗ್ಗೇಜ್ ಅನುಮತಿಸಲಾದ ತೂಕಕ್ಕಿಂತ ಹೆಚ್ಚು ತೂಕ ಇದ್ದಿದ್ದಕ್ಕೆ ತೊಂದರೆ ಅನುಭವಿಸಬೇಕಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಲಗೇಜ್‌ನಿಂದ 100 ಗ್ರಾಮ್‌ನಷ್ಟು ತೂಕವನ್ನು ಕಡಿಮೆ ಮಾಡುವಂತೆ ಸೂಚಿಸಲಾಯಿತು ಎಂದು ಟಿಒಐ ವರದಿ ಮಾಡಿದೆ.
ಮಹಿಳೆ ತನ್ನ ಚೆಕ್-ಇನ್ ಬ್ಯಾಗ್ ಅನ್ನು ಸ್ವಯಂಚಾಲಿತ ಬ್ಯಾಗೇಜ್ ಡ್ರಾಪ್ ಯಂತ್ರದಲ್ಲಿ ಇಟರು. ಆಗ ಬ್ಯಾಗಿನ ತೂಕ ತೂಕವನ್ನು 15.1 ಕೆಜಿ ಎಂದು ತೋರಿಸಿತು. ಅದು ಪ್ರತಿ ಪ್ರಯಾಣಿಕರಿಗೆ ಅನುಮತಿಸುವ ಮಿತಿಗಿಂತ 100 ಗ್ರಾಮ್ ಹೆಚ್ಚಾಗಿತ್ತು. ಹೆಚ್ಚುವರಿ 100 ಗ್ರಾಮ್ ಅನ್ನು ತನ್ನ ಇಬ್ಬರು ಸ್ನೇಹಿತರ ಬ್ಯಾಗ್‌ಗಳೊಂದಿಗೆ ಹೊಂದಿಸಬಹುದೇ ಮಹಿಳೆ ಕೇಳಿದರು. ಆದರೆ, ವಿಮಾನಯಾನ ಸಂಸ್ಥೆ ಸಿಬ್ಬಂದಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆಟೋಮೆಟಿಕ್ ಬ್ಯಾಗ್ ಡ್ರಾಪ್ ಮಷೀನ್ ನಿಖರವಾಗಿ 15 ಕೆ ಜಿ ಎಂದು ಮಾಪನ ಮಾಡಿದೆ. ಹಾಗಾಗಿ, ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಕಾರಣ ನೀಡಿದರು.
ಈ ಸುದ್ದಿಯನ್ನೂ ಓದಿ: JOB NEWS : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸದ್ಯವೇ 12 ಸಾವಿರ ಹೊಸ ಜಾಬ್ ಸೃಷ್ಟಿ
2020ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬ್ಯಾಗೇಜ್ ಮಿತಿಗೆ ಸಂಬಂಧಿಸಿದ ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ. ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಆಂತರಿಕ ಅಭ್ಯಾಸಗಳ ಪ್ರಕಾರ ನೀತಿಯನ್ನು ಹೊಂದಿಸುವ ಅಧಿಕಾರವನ್ನು ನೀಡಲಾಗಿದೆ. ಇದರರ್ಥ ವಿಮಾನಯಾನ ಸಂಸ್ಥೆಗಳು ಚೆಕ್-ಇನ್ ಲಗೇಜ್ ಮಿತಿಯನ್ನು 15 ಕೆಜಿಗೆ ಮರುಹೊಂದಿಸಬಹುದು. ಎಲ್ಲಾ ಪ್ರಮುಖ ವಿಮಾನಯಾನ ಸಂಸ್ಥೆಗಳು ಶೀಘ್ರದಲ್ಲೇ ತಮ್ಮ ಚೆಕ್-ಇನ್ ಲಗೇಜ್ ಮಿತಿಯನ್ನು 15 ಕೆಜಿಗೆ ಮರುಹೊಂದಿಸುತ್ತವೆ. ಚೆಕ್-ಇನ್ ಬ್ಯಾಗೇಜ್ ತೂಕದ ಮಿತಿಯನ್ನು ದಾಟಿದರೆ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ ಎಂಬುದನ್ನು ಗಮನಿಸಬೇಕು.