ಪುತ್ತೂರು (ದಕ್ಷಿಣ ಕನ್ನಡ) : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amith Sha at Karavali) ಅವರು ಶನಿವಾರ (ಫೆಬ್ರವರಿ 11ರಂದು) ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಪಂಚಮುಖಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದು ಪೂಜೆ ನೆರವೇರಿಸಿದರು. ಇದೇ ವೇಳೆ ಅಮರಗಿರಿಯ ಶ್ರೀ ಭಾರತಿ ಅಮರಜ್ಯೋತಿ ಮಂದಿರದ ಲೋಕಾರ್ಪಣೆ ಮಾಡಿದರು. ಇದು ಅವರಿಗೆ ಅತ್ಯಂತ ವಿಶೇಷ ಎನಿಸಿತು. ಯೋಧರಿಗಾಗಿ ನಿರ್ಮಿಸಲಾಗಿರುವ ಮಂದಿರ ಇದ್ದಾಗಿದ್ದು, ಭಾರತ್ ಮಾತಾ ಮಂದಿರವೆಂದೂ ಕರೆಯಲಾಗುತ್ತಿದೆ. ಭಾರತ ಮಾತೆಗೆ ನಿರ್ಮಿಸಲಾದ ದೇಶದ ಎರಡನೇ ಮಂದಿರವಿದು. ಕನ್ಯಾಕುಮಾರಿಯಲ್ಲಿ ಭಾರತ ಮಾತೆಗೆ ಇನ್ನೊಂದು ಮಂದಿರವಿದೆ.
ಧರ್ಮಶ್ರೀ ಪ್ರತಿಷ್ಠಾನ ಈ ದೇಗುಲವನ್ನು ನಿರ್ಮಿಸಿದ್ದು, ಆರು ಅಡಿ ಎತ್ತರದ ಭಾರತ್ ಮಾತಾ ವಿಗ್ರಹ ಹಾಗೂ ರೈತರು ಹಾಗೂ ಸೈನಿಕರ ಮೂರು ಅಡಿಯ ಪ್ರತಿಮೆಗಳೂ ಇವೆ. ಕರ್ನಾಟಕದ ಪಾಲಿಗೆ ವಿಶೇಷ ಎನಿಸಿರುವ ಈ ದೇಗುಲದ ಚಿತ್ರಗಳು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ಉದ್ಘಾಟನೆ ಮಾಡಿರುವ ಕೆಲವು ಚಿತ್ರಗಳು ಇಲ್ಲಿವೆ.