Site icon Vistara News

ಡಿಂಪಲ್‌ ಕ್ವೀನ್‌ ಕೊಡೋ ಸ್ವೀಟ್‌ ನ್ಯೂಸ್‌ ಏನು? ರಿವೀಲ್‌ ಆಯ್ತಾ ರಮ್ಯಾ ಹೊಸ ಪ್ಲ್ಯಾನ್!

ರಮ್ಯಾ

ಬೆಂಗಳೂರು: ಡಿಂಪಲ್ ಕ್ವೀನ್ ನಟಿ ರಮ್ಯಾ ಮಂಗಳವಾರ ಬೆಳಗ್ಗೆ ಟ್ವೀಟ್‌ ಮೂಲಕ‌ ಹೊಸ ಪ್ಲ್ಯಾನ್‌ ಬಗ್ಗೆ ಘೋಷಣೆ ಮಾಡಿ ಸಂಚಲನ ಸೃಷ್ಟಿಸಿದ್ದರು. ವಿಷಯ ಏನಿರಬಹುದು? ರಾಜಕೀಯವೇ? ಸಿನಿಮಾದ್ದೇ? ಇಲ್ಲವೇ ಅವರ ವೈಯಕ್ತಿಕವೇ? ಎಂಬೆಲ್ಲ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ, “ವಿಸ್ತಾರ ನ್ಯೂಸ್‌”ಗೆ ಈ ಬಗ್ಗೆ ಸುಳಿವು ಸಿಕ್ಕಿದ್ದು, ರಮ್ಯಾ ತಮ್ಮದೇ “ಪ್ರೊಡಕ್ಷನ್‌ ಹೌಸ್‌” ಪ್ರಾರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

“ಆಗಸ್ಟ್​ 31ರಂದು ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ” ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದರು. ಆ ಮೂಲಕ ಎಲ್ಲರ ತಳೆಯಲ್ಲಿ ಹುಳ ಬಿಡುವ ಕೆಲಸವನ್ನು ರಮ್ಯಾ ಮಾಡಿದ್ದರು. ಇದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದ್ದಲ್ಲದೆ, ಏನಿರಬಹುದು ಎಂಬ ಊಹೆಗಳು ಹರಿದಾಡಿದ್ದವು.

ಪ್ರೊಡಕ್ಷನ್ ಹೌಸ್?
ನಟಿ ರಮ್ಯಾ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಲಾಂಚ್ ಮಾಡಲಿದ್ದಾರೆ ಎಂಬ ಮಾತುಗಳು ಗಾಂಧಿನಗರದ ಗಲ್ಲಿಯಲ್ಲಿ ಓಡಾಡುತ್ತಿವೆ. ರಾಜ್ ಬಿ. ಶೆಟ್ಟಿ ನಿರ್ದೇಶಿಸುವ ಸಿನಿಮಾ ಮೂಲಕ ನಟಿ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಸಾಕಷ್ಟು ರಹಸ್ಯ ಕಾಯ್ದುಕೊಂಡಿರುವ ನಟಿ ರಮ್ಯಾ ನಾಳೆ ಬೆಳಗ್ಗೆ 11.15ಕ್ಕೆ ಎಲ್ಲವನ್ನೂ ಅಭಿಮಾನಿಗಳ ಎದುರು ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಲಿದ್ದಾರೆ.

ನಟ ರಾಜ್ ಬಿ. ಶೆಟ್ಟಿ ಈ ಹಿಂದೆ ಹಲವು ವೇದಿಕೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ರಮ್ಯಾ ಅವರನ್ನು ಹಾಡಿ ಹೊಗಳಿದ್ದರು. ಅಲ್ಲದೆ, ಹಲವು ಬಾರಿ ನೆಚ್ಚಿನ ನಟಿ ಯಾರು ಎಂಬ ಪ್ರಶ್ನೆ ಎದುರಾದಂತಹ ಸಂದರ್ಭದಲ್ಲಿ ರಮ್ಯಾ ಅವರಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಇದೀಗ ರಮ್ಯಾ ಪ್ರೊಡಕ್ಷನ್ ಹೌಸ್ ಲಾಂಚ್ ಮಾಡಿದರೆ ಮೊದಲ ಸಿನಿಮಾ ನಿರ್ದೇಶನ ಮಾಡಿದ ಕೀರ್ತಿ ರಾಜ್ ಬಿ. ಶೆಟ್ಟಿ ಅವರಿಗೆ ಸಲ್ಲಲಿದೆ. ಆದರೆ, ರಮ್ಯಾ ಈ ಸಿನಿಮಾದಲ್ಲಿ ನಟನೆ ಮಾಡುತ್ತಾರೋ ಅಥವಾ ಇಲ್ಲವೋ? ಎಂಬ ಕುರಿತು ಅಧಿಕೃತ ಮಾಹಿತಿಗಳು ಸಿಗಬೇಕಿದೆ. ಒಟ್ಟಾರೆ ನಟಿ ರಮ್ಯಾ ಯಾವುದೇ ಸಿಹಿಸುದ್ದಿ ಕೊಟ್ಟರೂ ಅಭಿಮಾನಿಗಳಿಗೆ ಪಕ್ಕಾ ಬಿಗ್ ಸರ್ಪ್ರೈಸ್ ಆಗಲಿದೆ. ಪಕ್ಕಾ ಸುದ್ದಿ ಏನು ಎಂಬುದನ್ನು ತಿಳಿಯಲು ಬುಧವಾರ ಬೆಳಗ್ಗೆ 11.15 ರವರೆಗೂ ಕಾಯಲೇಬೇಕಿದೆ.

ಇದನ್ನೂ ಓದಿ | ‘ಕೆಜಿಎಫ್-2’ ಸರಿಯಿಲ್ಲ ಎಂದಿದ್ದ ವಿವಾದಾತ್ಮಕ ಸಿನಿಮಾ ವಿಮರ್ಶಕ ಜೈಲುಪಾಲು!

Exit mobile version