ಗದಗ: ಕಾಂಕ್ರಿಟ್ ಬಾಗಿಲು (Door Fall) ಬಿದ್ದು ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿರುವ ಘಟನೆ ಗದಗದ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೂಮಿಕಾ ವೆಂಕಟೇಶ ದಾಸರ (4) ಗಂಭೀರ ಗಾಯಗೊಂಡವಳು.
ಅಂಗನವಾಡಿ ಆವರಣದಲ್ಲಿ ಪಕ್ಕದಲ್ಲಿದ್ದ ಮನೆಯವರು ಬಾಗಿಲ ಚೌಕಟ್ಟನ್ನು ಇಟ್ಟಿದ್ದರು. ಈ ವೇಳೆ ಭೂಮಿಕಾ ಆಟುವಾಡುತ್ತಾ ಬಾಗಿಲ ಚೌಕಟ್ಟಿನ ಬಳಿ ಹೋಗಿದ್ದಾಳೆ. ಈ ವೇಳೆ ಈಕೆಯ ತಲೆ ಮೇಲೆ ಏಕಾಏಕಿ ಬಾಗಿಲು ಬಿದ್ದಿದೆ. ಇದರಿಂದಾಗಿ ಬಾಲಕಿ ತಲೆಗೆ ಗಂಭೀರ ಗಾಯವಾಗಿದೆ.
ಇನ್ನು ಗಂಭೀರ ಗಾಯಗೊಂಡಿರುವ ಭೂಮಿಕಾಳನ್ನು ಗದಗದ ಜೀಮ್ಸ್‌ಗೆ ದಾಖಲಿಸಲಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಂಡರಗಿ ಸಿಡಿಪಿಓ ಮಹಾದೇವ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ವಿವರಗಳನ್ನು ಪಡೆದು ಗ್ರಾಮಸ್ಥರೊಂದಿಗೆ ಚರ್ಚೆಯನ್ನು ಮಾಡಿದ್ದಾರೆ.
ಇದನ್ನೂ ಓದಿ: Love Case: ಟೀಚರ್ ಮಗನ ಲವ್ ಟಾರ್ಚರ್‌ಗೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!
ಗಾಯಗೊಂಡ ಮಗುವಿಗೆ ಪರಿಹಾರಕ್ಕೆ ಆಗ್ರಹಿಸಿದ ಗ್ರಾಮಸ್ಥರು
ಅಂಗನವಾಡಿ ಕೇಂದ್ರಕ್ಕೆ ಬಂದ ಅಧಿಕಾರಿಯನ್ನು ಸುತ್ತುವರೆದ ಗ್ರಾಮಸ್ಥರು, ಗಾಯಗೊಂಡ ಮಗುವಿಗೆ ಪರಿಹಾರವನ್ನು ನೀಡುವಂತೆ ಆಗ್ರಹಿಸಿದರು. ತಂದೆ-ತಾಯಿ ಬಡವರು ಮಗುವನ್ನು ಅಂಗನವಾಡಿಗೆ ಕಳುಹಿಸಿ, ದುಡಿಯಲು ಹೋಗುತ್ತಾರೆ. ಮಗುವಿಗೆ ಈ ರೀತಿ ಆಗಿದ್ದಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಡ ಕುಟುಂಬಕ್ಕೆ ಇಲಾಖೆ ಸಹಾಯ ಮಾಡಬೇಕು ಎಂದು ಪಟ್ಟು ಹಿಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ