ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಸಮೀಪದ ಈರಣ್ಣನ ಬೆಟ್ಟದಲ್ಲಿ ಕರಡಿಗಳ (wild animals attack) ಹಿಂಡು ಪ್ರತ್ಯಕ್ಷವಾಗಿತ್ತು. ಬೆಟ್ಟದ ತಪ್ಪಲಿನಲ್ಲಿರುವ ಜಮೀನುಗಳಿಗೆ ತೆರಳಲು ರೈತರು ಹೆದರುವಂತಾಗಿತ್ತು. ಇದೀಗ ಮತ್ತೆ ಜಮೀನಿನಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರದಲ್ಲಿ ಆತಂಕ ಹೆಚ್ಚಿಸಿದೆ.
ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕರಡಿ ಓಡಾಟದ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಮಂಗಳವಾರ ಬೆಳಗ್ಗೆ ಜಮೀನಿನಲ್ಲಿ ಕರಡಿ ಓಡಾಡಿದ್ದು, ಬಳಿಕ ಗದ್ದಲ ಮಾಡಿ ಕರಡಿಯನ್ನು ಮತ್ತೆ ಬೆಟ್ಟದ ಕಡೆ ಓಡಿಸಿದ್ದಾರೆ.
ಹಗಲು ರಾತ್ರಿಯನ್ನದೇ ಕರಡಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದರಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಭಯಪಡುವಂತಾಗಿದೆ. ಕರಡಿಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಹಿಂದೆಯೂ ಆಹಾರಕ್ಕಾಗಿ ಬಂದ ಕರಡಿಯೊಂದು ಮರದಲ್ಲಿ ತಂತಿಗೆ ಸಿಲುಕಿಕೊಂಡು (Bear Stuck In Tree) ಪರದಾಡಿದ ಘಟನೆ ಕುಣಿಗಲ್ ತಾಲೂಕಿನ ಕಾಡಬೋರನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಬಳಿಕ ಅರಣ್ಯ ಸಿಬ್ಬಂದಿ ಕರಡಿಯನ್ನು ರಕ್ಷಣೆ ಮಾಡಿದ್ದರು.
ಇದಾದ ಬಳಿಕ ಎಲೆಕಡಕಲು ಗ್ರಾಮದಲ್ಲಿ ಕರಡಿ ದಾಳಿಗೆ (Bear Attacked) ರಾಜು (33) ಎಂಬ ರೈತ ಬಲಿಯಾಗಿದ್ದರು. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರಾಜು ಮೇಲೆ ಕರಡಿ ದಾಳಿ ನಡೆಸಿತ್ತು. ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೆ ಸ್ಥಳದಲ್ಲೇ ಜೀವ ಬಿಟ್ಟಿದ್ದರು.
ರಾಮನಗರದಲ್ಲಿ ಬೋನಿಗೆ ಬಿದ್ದಿದ್ದ ಕರಡಿ
ರಾಮನಗರದ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ (forest department) ಇರಿಸಿದ್ದ ಬೋನಿಗೆ ಕರಡಿಯೊಂದು (bear) ಏ.10ರ ಸೋಮವಾರ ಬಿದ್ದಿತ್ತು. ಹಲವು ದಿನಗಳಿಂದ ಕಾಡಂಚಿನ (Wild Animals Attack) ಗ್ರಾಮಸ್ಥರಿಗೆ ಕರಡಿಯು ಉಪಟಳ ನೀಡುತ್ತಿತ್ತು.
ಇದನ್ನೂ ಓದಿ: Murder Case: ಮನೆ ಮುಂದೆ ನಾಯಿ ವಿಸರ್ಜನೆ ಮಾಡಿಸಬೇಡಿ ಎಂದು ಆಕ್ಷೇಪಿಸಿದ್ದಕ್ಕೆ ಕೊಲೆ!
ಹೀಗಾಗಿ ಗ್ರಾಮಸ್ಥರು ಕರಡಿ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.ಗ್ರಾಮಸ್ಥರ ಮನವಿ ಮೇರೆಗೆ ಕರಡಿ ಓಡಾಡುವ ಜಾಗದಲ್ಲಿ ಬೋನು ಇರಿಸಲಾಗಿತ್ತು. ನಿನ್ನೆ ಸೋಮವಾರ ಸುಮಾರು 6 ವರ್ಷ ವಯಸ್ಸಿನ ಹೆಣ್ಣು ಕರಡಿ ಸೆರೆಯಾಗಿತ್ತು.