Site icon Vistara News

Wild Animals Attack: ತುಮಕೂರಿನ ಈರಣ್ಣನ ಬೆಟ್ಟದಲ್ಲಿ ಕರಡಿಗಳ ಹಿಂಡು; ರಾಮನಗರದ ಕಣ್ವ ಹೊಳೆಯಲ್ಲಿ ಕಾಡಾನೆಗಳ ದಂಡು

ತುಮಕೂರು/ರಾಮನಗರ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಸಮೀಪದ ಈರಣ್ಣನ ಬೆಟ್ಟದ ತಪ್ಪಲಿನಲ್ಲಿ ಕರಡಿಗಳ ಹಿಂಡು (Wild Animals Attack) ಪ್ರತ್ಯಕ್ಷವಾಗಿದ್ದವು. ಇದು ಕೆಲಕಾಲ ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿತ್ತು.

ಕರಡಿಗಳ ಹಿಂಡು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಕರಡಿಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ಜಮೀನುಗಳಿಗೆ ತೆರಳಲು ರೈತರು ಹೆದರುವಂತಾಗಿದೆ.

ಇದನ್ನೂ ಓದಿ: Star Dress Shopping : ಮಾರಾಟಕ್ಕಿವೆ ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಡಿಸೈನರ್‌ವೇರ್ಸ್‌

ಕಣ್ವ ಹೊಳೆ ನೀರಲ್ಲಿ ಕಾಡಾನೆಗಳ ಈಜಾಟ

ರಾಮನಗರದ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ. ಆಹಾರ ಅರಸಿ ನಾಡಿಗೆ ಬರುತ್ತಿರುವ ಗಜಪಡೆಯಿಂದಾಗಿ ಹಗಲು ರಾತ್ರಿ ಎನ್ನದೆ ಜನರು ಆತಂಕದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂರುವಂತಾಗಿದೆ. ಇಲ್ಲಿನ ಕಣ್ವ ಹೊಳೆ ನೀರಿನಲ್ಲಿ 6 ಆನೆಗಳು ಪ್ರತ್ಯಕ್ಷವಾಗಿ ಬೀಡುಬಿಟ್ಟಿವೆ. ಆನೆಗಳ ಹಿಂಡು ಕಂಡು ಗ್ರಾಮಸ್ಥರು ಭೀತಿಗೆ ಒಳಗಾಗಿದ್ದು, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಹರಸಾಹಸ ಪಡಬೇಕಾಯಿತು.

Exit mobile version