Site icon Vistara News

Wild Animals Attack | ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಕರು ಬಲಿ; ಹಾಸನದಲ್ಲಿ ಕಾಡಾನೆ ಹಾವಳಿ, ಚಿತ್ರದುರ್ಗದಲ್ಲಿ ಸೆರೆ ಸಿಕ್ಕ ಕರಡಿ

bear attcked

ಚಾಮರಾಜನಗರ/ಹಾಸನ/ಚಿತ್ರದುರ್ಗ: ಚಾಮರಾಜನಗರದಲ್ಲಿ ಚಿರತೆ ಹಾವಳಿ (Wild Animals Attack) ಮುಂದುವರಿದಿದ್ದು, ಬಂಡೀಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಕರುವೊಂದು ಬಲಿಯಾಗಿದೆ. ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಪ್ರಜ್ವಲ್ ಎಂಬುವರಿಗೆ ಸೇರಿದ ಕರು ಚಿರತೆಗೆ ಆಹಾರವಾಗಿದೆ.

ಚಿರತೆ ದಾಳಿಗೆ ಕರು ಬಲಿ

ಹುತ್ತೂರ ಕಿಲಗೆರೆ ಗೇಟ್ ಹಾಗೂ ಮಾದಲವಾಡಿ ಗ್ರಾಮದ ಮಾರ್ಗ ಮಧ್ಯೆ ಇರುವ ಜಮೀನಿನಲ್ಲಿ ತಡರಾತ್ರಿ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿಂದ ಕೆಲಗೆರೆ, ವೆಂಕಟರಮಣ ಸ್ವಾಮಿ ಬೆಟ್ಟದ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು, ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಾಸನದಲ್ಲಿ ಕಾಡಾನೆ ಹಾವಳಿ

ಹಾಸನದಲ್ಲಿ ಮುಂದುವರಿದ ಗಜ ಗಲಾಟೆ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಬೇಲೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಆಹಾರ ಅರಸಿ ಮನೆಯೊಂದರ ಬಳಿ ಒಂಟಿ ಸಲಗವೊಂದು ಬಂದಿದ್ದು, ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಆಗಿದೆ. ಮತ್ತೊಂದು ಕಡೆ ಮೊಬೈಲ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಶ್ವಾನಗಳು ಕಾಡಾನೆ ಕಂಡು ಬೊಗಳಲು ಶುರು ಮಾಡಿ ಹಿಂಬಾಲಿಸಿವೆ. ಇದರಿಂದ ಆನೆಯು ಅಲ್ಲಿಂದ ಹೊಸಳ್ಳಿ ರಸ್ತೆಯತ್ತ ಸಾಗಿದೆ. ಕಾಡಾನೆ ಕಾಟದಿಂದ ಜನರು ಹೈರಾಣಾಗಿದ್ದಾರೆ. ಶೀಘ್ರ ಸೆರೆಹಿಡಿಯುವಂತೆ ಒತ್ತಾಯಿಸುತ್ತಿದ್ದಾರೆ.

ಸೆರೆಯಾದ ಕರಡಿ

ಹೊಸದುರ್ಗ ಪಟ್ಟಣ ಬಳಿ ಏಳು ವರ್ಷದ ಕರಡಿ ಸೆರೆ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣ ಬಳಿ ಕರಡಿಯೊಂದು ಸೆರೆ ಆಗಿದೆ. ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಕರಡಿ ಉಪಟಳ ನೀಡುತ್ತಿತ್ತು. ಹೊಸದುರ್ಗದ ಸಾರಿಗೆ ಬಸ್ ನಿಲ್ದಾಣ ಬಳಿ ಕರಡಿ ಕಾಣಿಸಿಕೊಂಡಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹೊಸದುರ್ಗ ಹೊರವಲಯದಲ್ಲಿ ಪೊದೆಯಲ್ಲಿ ಸೇರಿಕೊಂಡಿದ್ದ ಕರಡಿಯನ್ನು ಸೆರೆ ಹಿಡಿದಿದ್ದಾರೆ. ಅರಿವಳಿಕೆ ಮದ್ದು ನೀಡಿ ಕರಡಿ ಸೆರೆ ಹಿಡಿದು ಬಳಿಕ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ | Elephant Attack | ಹುಣಸೂರು ಬಳಿ ಕಾಡಾನೆ ದಾಳಿಗೆ ಮಹಿಳೆ ಬಲಿ

Exit mobile version