Site icon Vistara News

Vijayanagara News: ಶಿವಪುರ ಗ್ರಾಮದಲ್ಲಿ ಕಾಡುಹಂದಿಗಳ ದಾಳಿ; ಮೆಕ್ಕೆಜೋಳ ಬೆಳೆ ನಾಶ

Wild boar attack in Shivpura village Destruction of maize crop in Kudligi

ಕೂಡ್ಲಿಗಿ: ಕಾಡು ಹಂದಿಗಳ ದಾಳಿಯಿಂದ (Wild boar attack) ಮೆಕ್ಕಜೋಳ ಬೆಳೆ (Maize crop) ನಾಶವಾಗಿರುವ ಘಟನೆ ತಾಲೂಕಿನ ಶಿವಪುರ (Shivpura) ಗ್ರಾಮದ ಜಮೀನಿನಲ್ಲಿ ಜರುಗಿದೆ.

ಶಿವಪುರ ಗ್ರಾಮದ ರೈತ ದಾಸಪ್ಪರ ರಾಮಪ್ಪ ತನ್ನ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಕಾಡು ಹಂದಿಗಳು ರಾತ್ರಿ ದಾಳಿ ನಡೆಸಿ, ನಾಶ ಮಾಡಿವೆ.

ಕಾಡುಹಂದಿ ದಾಳಿಯಿಂದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಮೆಕ್ಕೆಜೋಳ ಬೆಳೆ ನಷ್ಟ ಸಂಭವಿಸಿದ್ದು, ಸರ್ಕಾರದಿಂದ ಪರಿಹಾರ ನೀಡಬೇಕೆಂದು ರೈತ ದಾಸಪ್ಪರ ರಾಮಪ್ಪ ಮನವಿ ಮಾಡಿದ್ದಾನೆ.

ಕಾಡುಹಂದಿ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ರೈತರ ಬೆಳೆಗಳು ಹಾಳಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version