Site icon Vistara News

Chikkamagaluru News | ಗಣಪತಿ ಕಟ್ಟೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ: ಸ್ಥಳೀಯರಲ್ಲಿ ಆತಂಕ

Wild Elephant kalasa Horanadu Annapoorneshwari Ganapathikatte Village

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಗಣಪತಿ ಕಟ್ಟೆ ಗ್ರಾಮದಲ್ಲಿ ಮನೆಗಳ ಬಾಗಿಲಿಗೆ ಕಾಡಾನೆಗಳು (Chikkamagaluru News ) ರಾತ್ರಿ ವೇಳೆ ಬರುತ್ತಿದ್ದು, ಹಳ್ಳಿಗರಿಗೆ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರುವುದಕ್ಕೂ ಭಯಪಡುವಂತಹ ಸ್ಥಿತಿ ಉಂಟಾಗಿದೆ.

ಕಳಸ ತಾಲೂಕಿನ ಗಣಪತಿ ಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಾ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸಲು ಹುಡುಕಾಡುತ್ತಾ ಹರಸಾಹಸ ಪಡುತ್ತಿದ್ದಾರೆ. ಆದರೆ, ಒಮ್ಮೆ ಒಂದು ಜಾಗದಲ್ಲಿ ಕಂಡರೆ ಮತ್ತೊಮ್ಮೆ ಮತ್ತೊಂದು ಜಾಗಕ್ಕೆ ಹೋಗುತ್ತಿರುವುದರಿಂದ ಸ್ಥಳೀಯರು ಹಾಗೂ ಅಧಿಕಾರಿಗಳು ಹೈರಾಣಾಗಿದ್ದಾರೆ.

ಇದನ್ನೂ ಓದಿ | INDvsSL | ಮಿಂಚಿದ ಹೂಡಾ, ಅಕ್ಷರ್​; ಪ್ರವಾಸಿ ಶ್ರೀಲಂಕಾ ತಂಡಕ್ಕೆ163 ರನ್​ ಸವಾಲೊಡ್ಡಿದ ಭಾರತ

ಗಣಪತಿಕಟ್ಟೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿದೆ. ಈ ಮಾರ್ಗದಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ಭಕ್ತರು ಹಾಗೂ ಪ್ರವಾಸಿಗರು ಭಯಗೊಂಡಿದ್ದಾರೆ. ಗಣಪತಿ ಕಟ್ಟೆಯಲ್ಲೇ ಬೀಡು ಬಿಟ್ಟಿರುವ ಎರಡು ಕಾಡಾನೆಗಳು ರಾತ್ರಿ ವೇಳೆ ಮನೆಗಳ ಬಳಿಯೇ ಬರುತ್ತಿವೆ. ಸ್ಥಳೀಯರು ಮನೆಯ ಬಳಿ ಬಂದ ಆನೆಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. 20 ಜನ ಅಧಿಕಾರಿಗಳ ತಂಡದ ಜೊತೆ ಸ್ಥಳೀಯರು ಆನೆ ಓಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ | Supreme Court | ಸಿನಿಮಾ ಥಿಯೇಟರ್ ಜಿಮ್ ಅಲ್ಲ! ಆಹಾರ ನಿರ್ಬಂಧಿಸುವುದು ಮಾಲೀಕರ ಹಕ್ಕು ಎಂದ ಸುಪ್ರೀಂ ಕೋರ್ಟ್

Exit mobile version