Site icon Vistara News

Nrupathunga University: ನೃಪತುಂಗ ವಿವಿಗೆ ವಿಲೀನವಾಗುತ್ತಾ ಆರ್‌ಸಿ ಕಾಲೇಜು?

RC College merge with Nrupatunga University

ಬೆಂಗಳೂರು: ವಿಶ್ವವಿದ್ಯಾಲಯ ಎಂಬ ಪಟ್ಟ ಪಡೆದುಕೊಂಡ ನಂತರವೂ ನೃಪತುಂಗ ವಿಶ್ವವಿದ್ಯಾಲಯಕ್ಕೆ (Nrupathunga University) ಸಂಕಷ್ಟ ತಪ್ಪಿಲ್ಲ. ಸರ್ಕಾರಿ ವಿಜ್ಞಾನ ಕಾಲೇಜು ವಿಶ್ವವಿದ್ಯಾಲಯ ಆದರೂ ಸಹ ಶೈಕ್ಷಣಿಕ ಚುಟುವಟಿಕೆಗಳಿಗೆ ಬೇಕಾದ ಸ್ಥಳಾವಕಾಶ ಇಲ್ಲದೆ ಸೊರಗಿದೆ. ಹೀಗಾಗಿ ಸರ್ಕಾರಕ್ಕೆ ಈ ಬಗ್ಗೆ ಕುಲಪತಿಗಳು ಪತ್ರ ಬರೆದು ಹೊಸ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ.

ಹಲವರು ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ವಿಜ್ಞಾನ ಕಾಲೇಜ್‌ ಅನ್ನು ನೃಪತುಂಗ ವಿಶ್ವವಿದ್ಯಾಲಯ ಆಗಿ ಮಾರ್ಪಡಿಸಲಾಗಿದೆ. ಆದರೆ ವಿಶ್ವ ವಿಶ್ವವಿದ್ಯಾಲಯಕ್ಕೆ ಬೇಕಾದ ಜಾಗವನ್ನು ಕೊಡದೆ ಸರ್ಕಾರ ಸತಾಯಿಸುತ್ತಿದೆ. ಈ ಬಗ್ಗೆ ಕುಲಪತಿಗಳು ಮನವಿ ಮಾಡಿದರೂ ಸಹ ಉನ್ನತ ಶಿಕ್ಷಣ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ಬೇಡಿಕೆಯೊಂದನ್ನು ಮುಂದಿಟ್ಟಿರುವ ನೃಪತುಂಗ ವಿವಿ ಕುಲಪತಿ ಶ್ರೀನಿವಾಸ್ ಬಳ್ಳಿ, ಪಕ್ಕದಲ್ಲೇ ಇರುವ ಸರ್ಕಾರಿ ಕಲಾ ಕಾಲೇಜು ಹಾಗೂ ಆರ್‌ಸಿ ವಾಣಿಜ್ಯ ಕಾಲೇಜನ್ನು ವಿವಿಗೆ ವಿಲೀನ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ವಿವಿ ಕುಲಪತಿ ಶ್ರೀನಿವಾಸ್‌ ಬಳ್ಳಿ

ನಗರ ಭಾಗದಲ್ಲಿ ವಿವಿ ಎಂದ ಮೇಲೆ ಕನಿಷ್ಠ 10 ಎಕರೆಗಳ ವಿಸ್ತೀರ್ಣ ಇರಬೇಕು. ಆದರೆ ಸದ್ಯ 4 ಎಕರೆ ಜಾಗದಲ್ಲಿರುವ ನೃಪತುಂಗ ವಿವಿಗೆ ಜಾಗದ ಅಭಾವ ಇದೆ. ಹೀಗಾಗಿ ಇದಕ್ಕೆ ಅಂಟಿಕೊಂಡಿರುವ ಸರ್ಕಾರಿ ಕಲಾ ಕಾಲೇಜು ಹಾಗೂ ಚಾಲುಕ್ಯ ವೃತ್ತದಲ್ಲಿರುವ ಆರ್‌ಸಿ ವಾಣಿಜ್ಯ ಕಾಲೇಜುಗಳನ್ನು ನೃಪತುಂಗ ವಿವಿಗೆ ವಿಲೀನ ಮಾಡುವುದರಿಂದ ಜಾಗದ ಅಭಾವ ಕೊಂಚ ನೀಗಲಿದೆ. ವಿವಿ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕೂ ಸಾಧ್ಯವಾಗುತ್ತದೆ ಎಂದು ಶ್ರೀನಿವಾಸ್‌ ಬಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Day Care: ಡೇ ಕೇರ್‌ನಲ್ಲಿ ಪುಟಾಣಿ ಮೇಲೆ ಮತ್ತೊಂದು ಪುಟಾಣಿಯ ಭೀಕರ ಹಲ್ಲೆ! ಮಕ್ಕಳಲ್ಲಿ ಹೆಚ್ಚಿತೇ ಕ್ರೌರ್ಯ?

ಅದೇನೆ ಇರಲಿ, ನೃಪತುಂಗ ವಿವಿಯನ್ನು ಅದ್ಧೂರಿಯಾಗಿ ಆಗಿ ಉದ್ಘಾಟನೆ ಮಾಡಿದ ಈ ಹಿಂದಿನ ಸರ್ಕಾರ ಅದಕ್ಕೆ ಬೇಕಾದ ಮೂಲ ಸೌಕರ್ಯ ನೀಡುವಲ್ಲಿ ಸೋತಿತ್ತು. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿವಿಗೆ ಅದಕ್ಕೆ ಬೇಕಾದ ಸೌಲಭ್ಯ, ಜಾಗ ಇಲ್ಲದಿರುವುದು ಬೇಸರದ ಸಂಗತಿ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version