ಮಂಗಳೂರು: ಕೋತಿ ದಾಳಿಯಿಂದ (Monkey Attack) ಮಹಿಳೆ ಕೈಗೆ ಗಾಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ನಿವಾಸಿ ತ್ರೇಸಿಯಮ್ಮ ಕೆ.ವಿ (40) ಗಾಯಾಳು. ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಮಹಿಳೆ ಹೋಗುತ್ತಿದ್ದರು. ಪೆರಿಯಶಾಂತಿ ಎಂಬಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಮಗನ ಮೇಲೆ ದಾಳಿ ಕೋತಿ ದಾಳಿ ಮಾಡಿದೆ. ಈ ವೇಳೆ ಮಗ ಟೋನಿಯನ್ನು ರಕ್ಷಿಸಲು ಯತ್ನಿಸಿದಾಗ ಕೋತಿ ತಾಯಿ ಕೈಗೆ ಕೋತಿ ಕಚ್ಚಿದೆ. ನಂತರ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗಿದೆ.
ಪ್ರವಾಸಿಗರಿಗಾಗಿ ತಲೆ ಎತ್ತಿರುವ ಬೀದಿ ವ್ಯಾಪಾರದ ಅಂಗಡಿಗಳು ಈ ಪ್ರದೇಶದಲ್ಲಿ ಕೋತಿಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ. ಕೋತಿಗಳಿಗೆ ತಿಂಡಿ, ತಿನಿಸು ಎಸೆದು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಆಹಾರಕ್ಕಾಗಿ ಕೋತಿಗಳು ಜನರ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.
ಮದುವೆ ನಿಶ್ಚಯವಾದ ಹುಡುಗಿಗೆ ಪ್ರಿಯಕರನ ಕಿರುಕುಳ; ಟಾರ್ಚರ್ ಸಹಿಸಲಾಗದೆ ಸಾವಿಗೆ ಶರಣು
ರಾಯಚೂರು: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು (Marriage engaged girl) ಪ್ರಿಯಕರನ ಕಿರುಕುಳ ಸಹಿಸಲಾಗದೆ ಸಾವಿಗೆ ಶರಣಾದ ದಾರುಣ (Self Harming) ಘಟನೆ ರಾಯಚೂರಿನಲ್ಲಿ (Raichur News) ನಡೆದಿದೆ. ರಾಯಚೂರು ತಾಲ್ಲೂಕಿನ ಅರಷಣಗಿ ಗ್ರಾಮದಲ್ಲಿ ಪಾಗಲ್ ಪ್ರೇಮಿಯ ಟಾರ್ಚರ್ (Torture from Lover) ಸಹಿಸಲಾಗದೆ ಹಂಪಮ್ಮ ಎಂಬ 16 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ | Udupi Toilet Case : ಉಡುಪಿ ವಿಡಿಯೊ ಪ್ರಕರಣ SIT ತನಿಖೆ ಅಗತ್ಯ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ
ಏನಿದು ಪಾಗಲ್ ಪ್ರೇಮಿ ಮತ್ತು ಹುಡುಗಿಯ ಆತ್ಮಹತ್ಯೆ ಕತೆ?
ಅವಳ ಹೆಸರು ಹಂಪಮ್ಮ. 16 ವರ್ಷದ ಹುಡುಗಿ. ಆಕೆ ಕಳೆದ ಜುಲೈ 30ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಹಿಂದಿನ ಕಾರಣಗಳನ್ನು ಕೆದಕುತ್ತಾ ಹೋದಾಗ ಪ್ರಿಯಕರನ ಕಿರುಕುಳದ ಭಯಾನಕ ಕತೆ ತೆರೆದುಕೊಂಡಿದೆ.
ಹಂಪಮ್ಮಳನ್ನು ಇದೇ ಅರಷಣಗಿ ಗ್ರಾಮದ ರಮೇಶ್ ಎನ್ನುವ ಯುವಕ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ. ರಮೇಶ್ ವಾಸವಾಗಿರುವುದು ಹಂಪಮ್ಮಳ ಮನೆಯ ಎದುರು ಮನೆಯಲ್ಲಿ.
ರಮೇಶ ಹಂಪಮ್ಮಳ ಮನಸು ಕೆಡಿಸಿ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ ಎಂದು ತಿಳಿದ ಮನೆಯವರು ಆಕೆಯನ್ನು ಎಂಟನೇ ತರಗತಿಯಲ್ಲೇ ಶಾಲೆ ಬಿಡಿಸಿದ್ದರು. ಮತ್ತು ಮದುವೆ ಮಾಡಲು ಮುಂದಾಗಿದ್ದರು. ಅವರ ಹುಡುಕಾಟಕ್ಕೆ ತಕ್ಕಂತೆ ಅವರಿಗೆ ಸಂಬಂಧಿಕರಲ್ಲೇ ಒಬ್ಬ ಹುಡುಗ ಸಿಕ್ಕಿದ್ದ.
ಹಂಪಮ್ಮಳನ್ನು ಬೇರೆಯವರಿಗೆ ಮದುವೆ ಮಾಡಿಕೊಡಲಾಗುತ್ತಿದೆ ಎಂಬುದನ್ನು ತಿಳಿದ ರಮೇಶ್ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಮಾತ್ರವಲ್ಲ, ಆಕೆಯನ್ನು ಬೇರೆ ಬೇರೆ ರೀತಿಯಲ್ಲಿ ಕೆಣಕಲು ಶುರು ಮಾಡಿದ್ದ.
ರಮೇಶ್ ಎಷ್ಟು ಬುದ್ಧಿವಂತಿಕೆಯಿಂದ ಕಿರುಕುಳ ಮಾಡಲು ಶುರು ಮಾಡಿದನೆಂದರೆ, ಹಂಪಮ್ಮಗಳನ್ನು ಮದುವೆಯಾಗಲು ನಿರ್ಧಾರವಾಗಿದ್ದ ಹುಡುಗನನ್ನೇ ಸಂಪರ್ಕ ಮಾಡಿ ಆಕೆ ನನ್ನ ಹುಡುಗಿ ಎಂದಿದ್ದ. ಜತೆಗೆ ಹಂತ ಹಂತವಾಗಿ ತಾನು ಮತ್ತು ಆಕೆ ಜತೆಗಿರುವ ಚಿತ್ರಗಳು, ಮಾತನಾಡಿರುವ ಆಡಿಯೊಗಳು ಮತ್ತು ವಿಡಿಯೊಗಳನ್ನು ಕಳುಹಿಸಲು ಆರಂಭಿಸಿದ. ಅವಳಿಲ್ಲದೆ ನಾನು ಬದುಕಲಾರೆ, ಅವಳು ನನಗೆ ಬೇಕೇ ಬೇಕು ಎಂದೆಲ್ಲ ವರಾತ ತೆಗೆದಿದ್ದ.
ಎರಡು ವರ್ಷಗಳ ಕಾಲ ಕದ್ದು ಮುಚ್ಚಿ ಪ್ರೇಮಿಸಿದ್ದ ರಮೇಶ್ ಮತ್ತು ಹಂಪಮ್ಮನಿಗೆ ಸಂಬಂಧಿಸಿದ ಕೆಲವೊಂದು ವಿಡಿಯೊಗಳು, ಆತ್ಮೀಯ ಮಾತುಕತೆಯ ಆಡಿಯೊಗಳನ್ನು ರಮೇಶ್ ಕಾದಿರಿಸಿಕೊಂಡಿದ್ದ. ಇದನ್ನೆಲ್ಲ ನೋಡಿದ, ಕೇಳಿಸಿಕೊಂಡಿದ್ದ ಯುವಕ ಹಂಪಮ್ಮನ ಜತೆಗಿನ ಮದುವೆಯನ್ನೇ ಕ್ಯಾನ್ಸಲ್ ಮಾಡಿಬಿಟ್ಟ.
ಇದನ್ನೂ ಓದಿ | Road Accident : ಬೈಕ್‌ಗೆ ಬಸ್ ಡಿಕ್ಕಿ; ದೇವರ ದರ್ಶನ ಮಾಡಿ ಬಂದ ಇಬ್ಬರು ಸವಾರರು ರಸ್ತೆಯಲ್ಲೇ ಬಿದ್ದು ಮೃತ್ಯು
ಮಗಳ ಮದುವೆ ಕ್ಯಾನ್ಸಲ್ ಆಗಿದ್ದರಿಂದ ನೊಂದ ಹಂಪಮ್ಮಳ ತಂದೆ ದೇವೇಂದ್ರ ಅವರು ಮಾನಸಿಕವಾಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರು. ಆಗಲೂ ಬಿಡದೆ ಕಾಡಲು ಶುರು ಮಾಡಿದ್ದ ರಮೇಶ. ಅವನು ಮದುವೆ ಕ್ಯಾನ್ಸಲ್ ಮಾಡಿದ್ದಾನೆ ಅಂತ ಬೇಜಾರು ಮಾಡ್ಕೊಬೇಡ.. ನಾನಿದ್ದೇನೆ ಎಂದು ಬೆನ್ನು ಹತ್ತಲು ಶುರು ಮಾಡಿದ್ದ.
ಆತನ ಕಿರುಕುಳವನ್ನು ತಾಳಲಾರದೆ ಹೋದ ಹಂಪಮ್ಮ ಅಂತಿಮವಾಗಿ, ನಾನು ಇದ್ದರಲ್ಲವೇ ಇಷ್ಟೆಲ್ಲ ಸಮಸ್ಯೆ? ನಾನೇ ಪ್ರಾಣ ಕಳೆದುಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಿ ನೇಣಿಗೆ ಶರಣಾಗಿದ್ದಾಳೆ.
ಘಟನೆಯ ಬಳಿಕ ಇದೀಗ ಪೊಲೀಸರು ಆರೋಪಿ ರಮೇಶನನ್ನು ಬಂಧಿಸಿದ್ದಾರೆ. ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.