ಹೊಸನಗರ: ಪಟ್ಟಣದ ಹೊರವಲಯ ಮಾವಿನಕೊಪ್ಪದ ನಿವಾಸಿ ಯಶೋದಮ್ಮ (62) ಎಂಬುವರು ಶುಕ್ರವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ತಮ್ಮ ಮನೆಯ ಹಿಂದಿನ ಬಾವಿಗೆ (Well) ಹಾರಿದ್ದು, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಯಿಂದ ರಕ್ಷಿಸಿದ (Protect) ಘಟನೆ ಜರುಗಿದೆ.
ಯಶೋದಮ್ಮ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳು ಯಶೋದಮ್ಮ ಕಾಣದಾದಾಗ ಮನೆ ಹಿಂಭಾಗವೆಲ್ಲ ಹುಡುಕಾಟ ನಡೆಸಿದ್ದರು. ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡು ಬಗ್ಗಿ ನೋಡಿದಾಗ ಅತ್ತೆ ಯಶೋದಮ್ಮ ಬಾವಿಯೊಳಗೆ ಪೈಪ್ ಹಿಡಿದು ನಿಂತಿರುವುದನ್ನು ಕಂಡು ಭಯಭೀತರಾಗಿ ಆಸುಪಾಸಿನವರನ್ನು ಕೂಗಿ ಕರೆದಿದ್ದು ನಂತರ ತಕ್ಷಣ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಯಶೋದಮ್ಮನನ್ನು ಸಾಹಸದಿಂದ ಮೇಲಕ್ಕೆತ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Aditya-L1: ಈ ದಿನಾಂಕದಂದು ಮಿಷನ್ ಆದಿತ್ಯ ಎಲ್ 1 ಆರಂಭಿಸಲು ಇಸ್ರೊ ಸಿದ್ಧತೆ
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಕೆ.ಟಿ ರಾಜಪ್ಪ, ಎಚ್.ಡಿ ಸುರೇಶ, ಕೆ. ರವೀಂದ್ರ, ಶಂಕರೇಗೌಡ ಹಾನಗಳ್ಳಿ, ಬಿ.ಸಿ ಆಂಜನೇಯ, ಭೀಷ್ಮಚಾರಿ ಕಮ್ಮಾರ್, ಆರ್. ಮಣಿ ಮತ್ತಿತರರು ಯಶೋದಮ್ಮನನ್ನು ಉಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.