Site icon Vistara News

KPSC Exam: ತಾಳಿ, ಕಾಲುಂಗುರ ತೆಗೆಸಿದ ಸಿಬ್ಬಂದಿ; ಅಳುತ್ತಲೇ ಪರೀಕ್ಷೆ ಬರೆಯಲು ಹೋದ ಮಹಿಳೆ

KPSC Exam

ಕಲಬುರಗಿ: ಕೆಪಿಎಸ್‌ಸಿ ಗ್ರೂಪ್ ಸಿ ಹುದ್ದೆ ನೇಮಕಾತಿ ಪರೀಕ್ಷೆ ((KPSC Exam) ) ವೇಳೆ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದೆ. ಪರೀಕ್ಷಾ ಅಕ್ರಮ ತಡೆಯಲು ಬಿಗಿ ತಪಾಸಣೆ ಮಾಡುವ ವೇಳೆ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿದ್ದಾರೆ. ಇದರಿಂದ ಸಿಬ್ಬಂದಿ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.

ರಾಯಚೂರು ಮೂಲದ ಇಬ್ಬರು ಮಹಿಳೆಯರ ಕತ್ತಲ್ಲಿದ್ದ ತಾಳಿಯನ್ನು ಪರೀಕ್ಷಾ ಸಿಬ್ಬಂದಿ ತೆಗೆಸಿದ್ದಾರೆ. ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಘಟನೆ ನಡೆಯಿತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಈ ವೇಳೆ ಇಬ್ಬರು ಮಹಿಳೆಯರ ಕತ್ತಲ್ಲಿದ್ದ ತಾಳಿ, ಕಾಲುಂಗುರಗಳನ್ನು ತೆಗೆಸಲಾಗಿದೆ.

ಒಬ್ಬ ಮಹಿಳೆ ತಾಳಿ ತೆಗೆಯಲು ಹಿಂದೇಟು ಹಾಕಿದರು. ಆದರೆ, ಎಕ್ಸಾಮ್ ಸೆಂಟರ್‌ನೊಳಗೆ ಹೋಗಲು ಸಿಬ್ಬಂದಿ ಬಿಡಲಿಲ್ಲ. ಹೀಗಾಗಿ ಸಾಕಷ್ಟು ವಾಗ್ವಾದದ ಬಳಿಕ ಅನಿವಾರ್ಯವಾಗಿ ಕತ್ತಲ್ಲಿದ್ದ ತಾಳಿ ತೆಗೆದ ಮಹಿಳೆ, ಗೇಟ್‌ ಹೊರಗಿದ್ದ ಸಂಬಂಧಿಕರ ಕೈಗೆ ಕೊಟ್ಟು, ಅಳುತ್ತಲೇ ಪರೀಕ್ಷೆ ಬರೆಯಲು ಹೋದರು.

ಇದನ್ನೂ ಓದಿ | Murder Case : ಅಕ್ರಮ ಗಣಿಗಾರಿಕೆಗೆ ಬಲಿಯಾದ್ರಾ ಹಿರಿಯ ಭೂ ವಿಜ್ಞಾನಿ!

ಮತ್ತೊಬ್ಬ ಯುವತಿಗೆ ಬಂಗಾರದ ಕಿವಿಯೋಲೆ ತೆಗೆಯಲು ಅಗದಿದ್ದಾಗ ಕಟ್ ಮಾಡುವಂತೆ ಸಿಬ್ಬಂದಿ ಹೇಳಿದ್ದಾರೆ. ಬಳಿಕ ಬಳಿಕ ಅಕ್ಕಸಾಲಿಗರ ಬಳಿ ಹೋಗಿ ಓಲೆ ತೆಗೆಸಿ ಯುವತಿ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದಾಳೆ.

ತಾಳಿ, ಕಾಲುಂಗುರ ತೆಗೆದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ತಾಳಿ, ಕಾಲುಂಗುರ ತೆಗೆದು ಪರೀಕ್ಷೆ ಬರೆಯೋದು ಯಾವ ಕಾನೂನಿನಲ್ಲಿದೆ. ನಮ್ಮ ಹಿಂದು ಸಂಪ್ರದಾಯದಲ್ಲಿ ತಾಳಿ, ಕಾಲುಂಗುರಕ್ಕೆ ಮಹತ್ವ ಇದೆ. ಯಾವ ಪರೀಕ್ಷೆಯಲ್ಲೂ ಹೀಗೆ ಕಾನೂನು, ಸೂಚನೆ ಇಲ್ಲ. ತಾಳಿ, ಕಾಲುಂಗುರ ತೆಗೆಯೋದು ಅಂದ್ರೆ ಏನು ಅರ್ಥ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Road Accident : ಹಿಟ್‌ ಆ್ಯಂಡ್‌ ರನ್‌ಗೆ ಛಿದ್ರಗೊಂಡ ದೇಹ; ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಕೆಲವರು ಬ್ಲೂಟೂತ್ ಬಳಸಿದ್ದರಿಂದ ಕಲಬುರಗಿ, ಯಾದಗಿರಿಯಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿತ್ತು. ಹೀಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬಿಗಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version