Site icon Vistara News

Snake Bite: ಹೊಲದಲ್ಲಿ ಹಾವುಗಳು ಕಚ್ಚಿ ಮಹಿಳೆಯರ ಸಾವು; ವೈದ್ಯರೇ ಇಲ್ಲದ ಆಸ್ಪತ್ರೆಗಳು

Woman Died

ವಿಜಯನಗರ: ಇಲ್ಲಿನ ಹಡಗಲಿ ತಾಲೂಕಿನಲ್ಲಿ ಇಬ್ಬರು ಮಹಿಳೆಯರು ಹಾವು ಕಡಿದು (Snake Bite) ಮೃತಪಟ್ಟಿದ್ದಾರೆ. ಇವೆರಡೂ ಪ್ರತ್ಯೇಕ ಪ್ರಕರಣಗಳೇ ಆಗಿದ್ದರೂ, ಇಬ್ಬರ ಸಾವಿನಲ್ಲೂ ಸಾಮ್ಯತೆ ಇದೆ (Women Died By Snake Bite). ಮೃತ ಮಹಿಳೆಯರು ವೀಣಾ (26) ಮತ್ತು ಹುಲಿಗೆಮ್ಮ (49). ಇವರಿಬ್ಬರ ಸಾವಿನ ಕೇಸ್​ ಹಡಗಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವೀಣಾ ಅವರು ಹಡಗಲಿ ತಾಲೂಕಿನ ಹಿರೇಬನ್ನಿಮಲ್ಲು ಗ್ರಾಮದವರಾಗಿದ್ದು, ಹುಲಿಗೆಮ್ಮ ಅಂಗೂರು ಗ್ರಾಮದವರು. ವೀಣಾ ಮೆಕ್ಕೆಜೋಳ ಕೀಳಲೆಂದು ಹೊಲಕ್ಕೆ ಹೋಗಿದ್ದಾಗ ಹಾವಿನಿಂದ ಕಡಿತಕ್ಕೆ ಒಳಗಾಗಿದ್ದರು. ಇತ್ತ ಹುಲಿಗೆಮ್ಮ ಚಿಂಚಲಿಯಲ್ಲಿ ಹೊಲದಲ್ಲಿ ಕೆಲಸ ಮಾಡುವಾಗಲೇ ಹಾವು ಕಚ್ಚಿತ್ತು. ಈ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕಿ ಉಳಿಯಲಿಲ್ಲ.

ಇದನ್ನೂ ಓದಿ: Viral News : ಮಂಡ್ಯದಲ್ಲಿ ಬೈಕ್‌ ರೈಡಿಂಗ್‌ ವೇಳೆ ಎದ್ದುಬಂದ ಹಾವು; ಗಾಬರಿಯಾಗಿ ಜಿಗಿದೇ ಬಿಟ್ಟ ಸವಾರ

ಎರಡೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲ!
ವೀಣಾ ಮತ್ತು ಹುಲಿಗೆಮ್ಮ ಇಬ್ಬರ ಸಾವಿನಲ್ಲೂ ಆಸ್ಪತ್ರೆಗಳ ಅವ್ಯವಸ್ಥೆ ಕಂಡುಬಂದಿದೆ. ಹಾವು ಕಡಿತದಿಂದ ಅಸ್ವಸ್ಥರಾಗಿದ್ದ ವೀಣಾರನ್ನು ತಕ್ಷಣವೇ ಹೊಳಲು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ವೈದ್ಯರೇ ಇರಲಿಲ್ಲ. ಹೀಗಾಗಿ ವೀಣಾಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ವಿಷ ಮೈತುಂಬ ಪಸರಿಸಿ ಮೃತಪಟ್ಟರು. ಇತ್ತ ಹುಲಿಗೆಮ್ಮ ಸಾವಿನಲ್ಲೂ ಥೇಟ್ ಇದೇ ಅಂಶವೇ ಕಂಡುಬಂದಿದೆ. ಹುಲಿಗೆಮ್ಮ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲೂ ವೈದ್ಯರಿಲ್ಲದೆ ಚಿಕಿತ್ಸೆ ವಿಳಂಬವಾಯಿತು. ಹುಲಿಗೆಮ್ಮ ಮೃತರಾದರು. ಈ ಬಗ್ಗೆ ಎರಡೂ ಕುಟುಂಬದವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version