ಕಾರವಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (Women’s Day 2023) ಅಂಗವಾಗಿ ತಾಲೂಕು ಪಂಚಾಯಿತಿ ಕಾರವಾರ ಮತ್ತು ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ನಗರದ ಮಾಲಾದೇವಿ ಮೈದಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಬುಧವಾರ (ಮಾ.8) ಆಯೋಜಿಸಲಾಗಿತ್ತು.
ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಕುಮಾರ ಬಾಲಪ್ಪನವರ ಪಂದ್ಯಾವಳಿಯನ್ನು ಉದ್ಘಾಟಿಸಿ, ಬ್ಯಾಟಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಪಂದ್ಯಾವಳಿಯಲ್ಲಿ ಕಡವಾಡ ಸಮೃದ್ಧಿ ತಂಡ, ಶಿವಾಜಿ ಕಾಲೇಜು ಬಾಡ, ಸರಸ್ವತಿ ವಿದ್ಯಾಲಯ ಕಾರವಾರ, ಬಾಪೂಜಿ ಕಾಲೇಜು ಸದಾಶಿವಗಡ, ಮಹಾಲಕ್ಷ್ಮೀ ತಂಡ, ಅನಿಸ್ಸಾದಾಸರದ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಶಿವಾಜಿ ಕಾಲೇಜು ತಂಡ ಮತ್ತು ಅನಿಸ್ಸಾದಾಸರ ತಂಡವು ಅಂತಿಮ ಹಂತದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನವನ್ನು ಅನಿಸ್ಸಾದಾಸರ ಮತ್ತು ದ್ವಿತೀಯ ಸ್ಥಾನವನ್ನು ಶಿವಾಜಿ ಕಾಲೇಜು ತಂಡ ಪಡೆಯುವ ಮೂಲಕ ತಮ್ಮ ಸಾಮರ್ಥ್ಯದ ಮೂಲಕ ಜಯ ಗಳಿಸಿದರು.
ಇದನ್ನೂ ಓದಿ: Viral Video : ಸಿಂಹಿಣಿಯನ್ನು ಹೆದರಿಸಿ ಓಡಿಸಿದ ಆನೆಯ ವಿಡಿಯೊ ಭಾರೀ ವೈರಲ್
ಎನ್ಆರ್ಎಲ್ಎಂ ಯೋಜನೆಯ ಎಪಿಒ ಸುರೇಶ್ ನಾಯ್ಕ, ತಾಲೂಕು ಐಇಸಿ ಸಂಯೋಜಕರಾದ ಸೌಂದರ್ಯ, ಕಾರವಾರ ತಾಲೂಕು ಪಂಚಾಯಿತಿಯ ಎಪಿಎಂ ಸುಬ್ರಹ್ಮಣ್ಯ, ಎನ್ ಆರ್ ಎಲ್ ಎಂ ಸಿಬ್ಬಂದಿ, ಕ್ರಿಕೆಟ್ ಕೋಚ್, ಅಂಪೈರ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: JDS Hassan: ನನಗ್ಯಾಕೆ ಟಿಕೆಟ್ ಇಲ್ಲ?: ನೇರವಾಗಿ ಎಚ್.ಡಿ. ದೇವೇಗೌಡರೊಂದಿಗೆ ಭವಾನಿ ರೇವಣ್ಣ ಚರ್ಚೆ