Site icon Vistara News

ವರ್ಲ್ಡ್‌ ರಾಮಾಯಣ ಚಾಂಪಿಯನ್‌ಶಿಪ್‌ 2023; ಶ್ರೀರಾಮ ಹೊಳ್ಳ, ಸಾತ್ವಿಕ್‌ ಗೌತಮ್‌ ಪ್ರಥಮ

World Ramayana Championship new

ಬೆಂಗಳೂರು: ಅಯೋಧ್ಯಾ ಫೌಂಡೇಶನ್‌ ನಡೆಸಿದ್ದ 2023ನೇ ಸಾಲಿನ ವರ್ಲ್ಡ್‌ ರಾಮಾಯಣ ಚಾಂಪಿಯನ್‌ಶಿಪ್‌ (World Ramayana Championship) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಸಂವಿದಾ ಶಾಲೆಯ ವಿದ್ಯಾರ್ಥಿ ಶ್ರೀರಾಮ ಹೊಳ್ಳ, ಡ್ಯಾಫೊಡಿಲ್ಸ್‌ ಇಂಗ್ಲಿಷ್‌ ಶಾಲೆ ವಿದ್ಯಾರ್ಥಿ ಸಾತ್ವಿಕ್‌ ಗೌತಮ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

ಪರೀಕ್ಷೆಗೆ 13,028 ಜನ ನೋಂದಾಯಿಸಿದ್ದರು. ಜನವರಿ 14 ಮತ್ತು 18ರಂದು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾದ ದಿನ ಫಲಿತಾಂಶ ಘೋಷಿಸಲಾಗಿದೆ.

ವಿಜೇತರಿಗೆ ಫೆಬ್ರವರಿ 4ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಸಿ.ಎಸ್.ಅಶ್ವತ್ಥ್‌ ಸಭಾಂಗಣದಲ್ಲಿ ಬಹುಮಾನ, ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ | Education News: ಶಾಲೆಗಳಲ್ಲಿ ಗಾಂಧೀಜಿ ವಿಚಾರಧಾರೆಯ ಪ್ರಬಂಧ ಸ್ಪರ್ಧೆ; ಮಧು ಬಂಗಾರಪ್ಪಗೆ ಸಿಎಂ ಸೂಚನೆ

ಬಹುಮಾನ ವಿವರ

ಮೊದಲ ಬಹುಮಾನ (2 ವಿದ್ಯಾರ್ಥಿಗಳಿಗೆ)
ಪೋಷಕರೊಂದಿಗೆ ಅಯೋಧ್ಯೆ ಪ್ರವಾಸ

ದ್ವಿತೀಯ ಬಹುಮಾನ (6 ವಿದ್ಯಾರ್ಥಿಗಳಿಗೆ)
ಪ್ರತಿಯೊಬ್ಬರಿಗೂ 25,000 ರೂ. ನಗದು

ತೃತೀಯ ಬಹುಮಾನ (40 ವಿದ್ಯಾರ್ಥಿಗಳಿಗೆ)
ಪ್ರತಿಯೊಬ್ಬರಿಗೂ 5,000 ರೂ. ಮೌಲ್ಯದ ಎಲೆಕ್ಟ್ರಾನಿಕ್‌ ಗ್ಯಾಜೆಟ್ಸ್

ವಿಜೇತರ ಪಟ್ಟಿ ಇಲ್ಲಿದೆ

Exit mobile version