Site icon Vistara News

Kannada Sahitya Parishat: ನಿರ್ಮಲಾ ಎಲಿಗಾರ್ ಅಮಾನತು: ಕಸಾಪ ಅಧ್ಯಕ್ಷ ಜೋಶಿ ವರ್ತನೆಗೆ ಲೇಖಕಿಯರ ಸಂಘ ಖಂಡನೆ

Writers Association condemns the behaviour of Sahitya parishat president for Nirmala Eligars membership suspended

#image_title

ಬೆಂಗಳೂರು: ದೂರದರ್ಶನ ಚಂದನ ವಾಹಿನಿಯ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತುಗೊಳಿಸಿರುವುದು ಮತ್ತು ಅವರಿಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ (Kannada Sahitya Parishat) ಕ್ರಮವನ್ನು ಕರ್ನಾಟಕ ಲೇಖಕಿಯರ ಸಂಘ ತೀವ್ರವಾಗಿ ಖಂಡಿಸಿದೆ.

ಕರ್ತವ್ಯದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ಲೇಖಕಿ ಹಾಗೂ ಭಾರತೀಯ ಪ್ರಸಾರ ಸೇವೆ, ಸಹಾಯಕ ನಿರ್ದೇಶಕರು ಹಾಗೂ ಚಂದನ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರಾದ ನಿರ್ಮಲಾ ಸಿ. ಎಲಿಗಾರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವದಿಂದ ಅಮಾನತು ಮಾಡಿರುವ ಕ್ರಮವನ್ನು ಲೇಖಕಿಯರಾದ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಅವರು ಸೇರಿ 28 ಪದಾಧಿಕಾರಿಗಳು ಹಾಗೂ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | Shortage of medicines: ರಾಜಧಾನಿ ಬೆಂಗಳೂರಿನಲ್ಲಿ ಸೀಸನಲ್ ಫ್ಲೂಗೆ ಸಿಗ್ತಿಲ್ಲ ಮೆಡಿಸಿನ್ಸ್‌! ರೋಗಿಗಳ ಪರದಾಟ

ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ಉತ್ತರ ಪಡೆಯುವ ಎರಡೂ ಹಕ್ಕುಗಳಿರುತ್ತವೆ. ಈ ಹಕ್ಕುಗಳನ್ನು ಮೊಟಕುಗೊಳಿಸಿ ಕನ್ನಡತನದ ಸಾಕ್ಷಿಯಂತಿರುವ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಇಂತಹ ಸರ್ವಾಧಿಕಾರದ ಕ್ರಮವನ್ನು ಕೈಗೊಂಡಿರುವುದು ಶೋಭೆ ತರುವಂತಹ ಕೆಲಸವಲ್ಲ. ಪರಿಷತ್ತಿನ ಇತಿಹಾಸದಲ್ಲಿ ಇಂತಹ ಕಪ್ಪುಚುಕ್ಕೆ ಇಡುವ ಕೆಲಸ ನಡೆಯಬಾರದು ಎಂದು ಹೇಳಿದ್ದಾರೆ.

ಕೊಟ್ಟ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳುವುದು ಕೂಡ ಸರಿಯಾದ ಕ್ರಮವಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರ ಹೆಸರಿನ ಪ್ರಶಸ್ತಿಗಳು ಇಂತಹ ಗುದ್ದಾಟಗಳಲ್ಲಿ ಅವಮಾನಕ್ಕೆ ಒಳಗಾಗಬಾರದು. ಇಂದು ಲೇಖಕಿಯಾದ ನಿರ್ಮಲಾ ಎಲಿಗಾರ್, ನಾಳೆ ಮತ್ತಾರೋ ಎಂಬ ಪರಂಪರೆ ಬೆಳೆಯಬಾರದು. ಪರಿಷತ್‌ನ ಘನತೆಗೆ ಕುಂದು ತರುವಂತಹ ಕ್ರಮವನ್ನು ನಾವೆಲ್ಲರೂ ಆಕ್ಷೇಪಿಸುತ್ತೇವೆ. ಈ ಕೂಡಲೇ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಬೇಕು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | CM Bommai : 1.14 ಲಕ್ಷ ಒಬಿಸಿ ಫಲಾನುಭವಿಗಳಿಗೆ 900 ಕೋಟಿ ರೂ. ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಸದಸ್ಯತ್ವ ಅಮಾನತಿಗೆ ಕಾರಣವೇನು?

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸತಿ ಸೌಲಭ್ಯ ಸೇರಿ ಇನ್ನಿತರ ಅವ್ಯವಸ್ಥೆ ಬಗ್ಗೆ ನಿರ್ಮಲಾ ಸಿ. ಎಲಿಗಾರ್ ಅವರು ಪರಿಷತ್‌ ಅಧ್ಯಕ್ಷರೊಂದಿಗೆ ಮಾತಿನ ಚಕಮಕಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಷ್ಟೇ ಅಲ್ಲದೇ ದೂರದರ್ಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು.‌ ಇದು ನಿರ್ಮಲಾ ಸಿ. ಎಲಿಗಾರ್ ಅವರ ಸದಸ್ಯತ್ವ ಅಮಾನತಿಗೆ ಪ್ರಮುಖ ಕಾರಣ ಎಂದು ಕನ್ನಡ ಸಾಹಿತ್ಯ ಪರಿಷತ್‌ ಪ್ರಕಟಣೆ ತಿಳಿಸಿತ್ತು.

Exit mobile version