ಬನವಾಸಿ: ಸಮೀಪದ ಭಾಶಿ ಗ್ರಾಮ ಪಂಚಾಯಿತಿಯಲ್ಲಿ (Grama Panchayat) ಎರಡನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ (Election) ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಬಿಜೆಪಿ (BJP) ಬೆಂಬಲಿತರಾಗಿದ್ದು, ಕಾಂಗ್ರೆಸ್ (Congress) ಬೆಂಬಲಿತರೆಂದು ಸಾಮಾಜಿಕ ಜಾಲತಾಣ ಹಾಗೂ ಕೆಲ ಪತ್ರಿಕೆಗಳಲ್ಲಿ ತಪ್ಪು ಸಂದೇಶ (Wrong message) ನೀಡಲಾಗುತ್ತಿದೆ ಎಂದು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್ ಮರೆಗುಡ್ಡೆ ಹೇಳಿದರು.
ಈ ಕುರಿತು ಶುಕ್ರವಾರ ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಶಿ ಗ್ರಾ.ಪಂಗೆ ಅಧ್ಯಕ್ಷರಾಗಿ ಆಯ್ಕೆಯಾದ ದಾಕ್ಷಾಯಿಣಿ ನಾಯ್ಕ್, ಉಪಾಧ್ಯಕ್ಷರಾದ ಮುತ್ತಮ್ಮ ಶಿವಾನಂದ ಮಡಿವಾಳ ಬಿಜೆಪಿ ಬೆಂಬಲಿತರು. ಆದರೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟವಾದ ದಿನ ಸಾಮಾಜಿಕ ಜಾಲತಾಣ ಹಾಗೂ ಕೆಲ ಪತ್ರಿಕೆಗಳಿಗೆ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ತಪ್ಪು ಮಾಹಿತಿಯನ್ನು ನೀಡಲಾಗಿತ್ತು.
ಇದನ್ನೂ ಓದಿ: Gold Rate Today: ಬಂಗಾರದ ದರ ಯಥಾಸ್ಥಿತಿ, ಬೆಳ್ಳಿ ದರವೂ ಬದಲಾವಣೆ ಇಲ್ಲ
ಭಾಶಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೂ ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿದ್ದು ಗುರುವಾರ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ದಾಕ್ಷಾಯಿಣಿ ನಾಯ್ಕ್ ಅಧ್ಯಕ್ಷರಾಗಿ, ಮುತ್ತಮ್ಮ ಶಿವಾನಂದ ಮಡಿವಾಳ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾಲಾರ್ಪಣೆ ಮಾಡಿದ್ದಾರೆ. ಇದನ್ನೇ ಕೆಲವರು ಪೋಟೋ ತೆಗೆದು ಭಾಶಿ ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗೆ ತಪ್ಪಾದ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಬಳಿ ಕೇಳಿದಾಗ ನಾವು ಬಿಜೆಪಿಯ ಬೆಂಬಲಿತರು ಯಾವ ಕಾರಣಕ್ಕಾಗಿ ಈ ರೀತಿಯ ತಪ್ಪು ಸಂದೇಶ ಹಬ್ಬಿದೆ ಎಂಬುದು ತಿಳಿದಿಲ್ಲವಾಗಿದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ ಎಂದು ಹೇಳಿದರು.
ಭಾಶಿ ಗ್ರಾಪಂನ ನೂತನ ಅಧ್ಯಕ್ಷೆ ದಾಕ್ಷಾಯಿಣಿ ನಾಯ್ಕ್ ಮಾತನಾಡಿ, ನಾನು ರಾಜಕೀಯಕ್ಕೆ ಬರುವ ಮೊದಲೇ ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿದ್ದೆ. ಈಗಲೂ ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿಯೇ ಇದ್ದೇನೆ, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶದ ಬಳಿಕ ಕೆಲ ಊಹಾಪೋಹಗಳು ಹರಡಿದ್ದು ಅದೆಲ್ಲ ಸುಳ್ಳು ಸುದ್ದಿಯಾಗಿದೆ. ನಾವು ಬಿಜೆಪಿ ಪಕ್ಷದ ಬೆಂಬಲಿತರಾಗಿದ್ದೆವೆ. ಬಿಜೆಪಿ ಪಕ್ಷ ಹಾಗು ಶಾಸಕ ಶಿವರಾಮ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸುತ್ತೆವೆ ಎಂದು ತಿಳಿಸಿದರು.
ಭಾಶಿ ಗ್ರಾ ಪಂ ಉಪಾಧ್ಯಕ್ಷೆ ಮುತ್ತಮ್ಮ ಶಿವಾನಂದ ಮಡಿವಾಳ ಮಾತನಾಡಿದರು.
ಇದನ್ನೂ ಓದಿ: Prithvi Shaw: ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ; ಪೃಥ್ವಿ ಶಾ
ಈ ಸಂದರ್ಭದಲ್ಲಿ ಬನವಾಸಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದವೀರೇಶ ನೆರಗಲ್, ಭಾಶಿ ಶಕ್ತಿ ಕೇಂದ್ರದ ಅಧ್ಯಕ್ಷ ಗಜಾನನ ಗೌಡ, ಗ್ರಾಪಂ ಸದಸ್ಯ ಪ್ರಭಾಕರ ಗೌಡ, ಮುಖಂಡರಾದ ನರಸಿಂಹ ನಾಯ್ಕ್, ಚಂದ್ರಶೇಖರ ಗೌಡ ಕಡಗೋಡ, ಮಹೇಶ ನಾಯ್ಕ್, ರಾಮು ನಾಯ್ಕ್, ಲೋಕೇಶ್ ನಾಯ್ಕ್, ಕಲಕರಡಿ ನಾಗರಾಜ್ ನಾಯ್ಕ್ ಮತ್ತಿತರರು ಇದ್ದರು.