Site icon Vistara News

Yadgir News | ಪತ್ರಕರ್ತರ ಸಂಘದಿಂದ‌ ಪತ್ರಕರ್ತರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ

Games for Journalists yadagiri

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ‌ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು (Yadgir News) ಗುರುವಾರ (ಡಿ.೨೯) ಆಯೋಜಿಸಲಾಗಿತ್ತು.

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಕರ್ತರಿಗಾಗಿ ಕ್ರೀಡಾಕೂಟ ನಡೆಯಿತು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಸಂಕೀನ್ ಹಾಗೂ ಪತ್ರಕರ್ತರು ಕ್ರೀಡಾ ಜ್ಯೋತಿಯನ್ನು ತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ ವೇದಮೂರ್ತಿ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಪತ್ರಕರ್ತರಿಗಾಗಿ 100 ಮೀಟರ್ ಓಟ, ಕ್ರಿಕೆಟ್ ಪಂದ್ಯಾವಳಿ , ಕೇರಂ, ಚೆಸ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಜತೆಗೆ ಪತ್ರಕರ್ತರ ಕುಟುಂದವರಿಗಾಗಿಯೂ ಹಗ್ಗ ಜಗ್ಗಾಟ ಸ್ಪರ್ಧೆಯೂ ನಡೆಯಿತು.

ಇದನ್ನೂ ಓದಿ | Dhoni Style Run Out | ಧೋನಿಯಂತೆ ರನೌಟ್​ ಮಾಡಿದ ನೇಪಾಳದ ವಿಕೆಟ್ ಕೀಪರ್; ವಿಡಿಯೊ ವೈರಲ್

Exit mobile version