Site icon Vistara News

Farmers Death : ಬೆಳೆಗೆ ತಂದಿದ್ದ ಕ್ರಿಮಿನಾಶಕವನ್ನೇ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ

Farmer Govindhappa Death in yadagiri

ಯಾದಗಿರಿ: ಸಾಲಸೋಲ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ಮಳೆ ಕೈ ಕೊಟ್ಟು, ಬೆಳೆ ಎಲ್ಲವೂ ನೆಲಕಚ್ಚಿದೆ. ಕೈಗೆ ಫಸಲು ಬಾರದೆ ರೈತರು ಸಾಲಗಾರರು ಆಗುತ್ತಿದ್ದಾರೆ. ಯಾದಗಿರಿಯ (Yadagiri News) ಶೆಟ್ಟಗೇರಾ ಗ್ರಾಮದಲ್ಲಿ ಸಾಲಭಾದೆಗೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆ (Farmer Death) ಮಾಡಿಕೊಂಡಿದ್ದಾರೆ. ಶೆಟ್ಟಗೇರಾ ಗ್ರಾಮದ ರೈತ ಗೋವಿಂದಪ್ಪ (35) ಮೃತ ದುರ್ದೈವಿ.

ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಗೋವಿಂದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಎಕರೆ ಭೂಮಿಯನ್ನು ಬಾಡಿಗೆ ಪಡೆದು ಹತ್ತಿ ಬೆಳೆದಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆ ಹತ್ತಿ ಬೆಳೆಯು ಉತ್ತಮ ಫಸಲು ಬರದೆ ಹಾನಿಯಾಗಿದೆ. ಸಾಲಬಾಧೆಯಿಂದ ನೊಂದ ಗೋವಿಂದಪ್ಪ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಗಾರರ ಕಾಟಕ್ಕೆ ಎರಡು ವರ್ಷದ ಹಿಂದೆ ಸ್ವಂತ 3 ಎಕರೆ ಜಮೀನು ಮಾರಾಟ ಮಾಡಿದ್ದರು. ಜತೆಗೆ ಬ್ಯಾಂಕ್ ಸೇರಿ 7ಲಕ್ಷ ಸಾಲ ಮಾಡಿಕೊಂಡಿದ್ದರು .ಆದರೆ ಈ ಬಾರಿಯೂ ಬೆಳೆ ಕೈಗೆ ಬಾರದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Self Harming : 13ರ ಹರೆಯದ ಕುಸ್ತಿಪಟು ಬಾಲಕಿ ಗರಡಿ ಮನೆಯಲ್ಲೇ ಆತ್ಮಹತ್ಯೆ

ಮರಕ್ಕೆ ನೇಣು ಬಿಗಿದುಕೊಂಡ ರೈತ

ಬರಗಾಲದ ಹಿನ್ನೆಲೆ ಬೆಳೆ ಬಾರದೆ ರೈತನೊಬ್ಬ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಪರಸಪ್ಪ ಉಮಚಗಿ (25) ಆತ್ಮಹತ್ಯೆ ಮಾಡಿಕೊಂಡವರು.

ಎರಡು ಎಕರೆ ಜಮೀನಿನಲ್ಲಿ ಯಾವ ಬೆಳೆ ಬಾರದ ಕಾರಣಕ್ಕೆ ಮನನೊಂದು ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಸಪ್ಪನ ತಂದೆ ಕೆನರಾ ಬ್ಯಾಂಕ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಬ್ಯಾಂಕ್‌ನವರು ಪರಸಪ್ಪನಿಗೆ ಸಾಲ ಮರುಪಾವತಿ ಮಾಡಲು ಒತ್ತಾಯ ಮಾಡಿದ್ದರು.

ಹೀಗಾಗಿ ಕೈ ಸಾಲ ಮಾಡಿ ಬ್ಯಾಂಕ್‌ಗೆ ಹಣವನ್ನು ಕಟ್ಟಿದ್ದರು. ಆದರೆ ಮತ್ತೆ ಸಾಲಕ್ಕಾಗಿ ಬ್ಯಾಂಕ್‌ ಮೊರೆ ಹೋದಾಗ ಮತ್ತೆ ಸಾಲವನ್ನು ಮಂಜೂರು ಮಾಡಲು ನಿರಾಕರಿಸಿದ್ದಾರೆ. ಇತ್ತ ಸಾಲಗಾರರ ಕಾಟ ಹಾಗೂ ಬೆಳೆ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version