Site icon Vistara News

Yadgiri News: ಯಾದಗಿರಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವೆ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Inauguration of Public Relations Office of MLA at Yadgiri

ಯಾದಗಿರಿ: ಹಳ್ಳಿಗಳಲ್ಲಿ (Villages) ಮೂಲಭೂತ ಸೌಕರ್ಯಗಳ (Infrastructure) ಜತೆ ಅಗತ್ಯ ಸೌಲಭ್ಯ ಕಲ್ಪಿಸಿ, ಯಾದಗಿರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ (Model constituency) ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದ ಶಾಸ್ತ್ರೀ ವೃತ್ತದ ಸಮೀಪದಲ್ಲಿ ಸೋಮವಾರ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆ ಮಾಡಿ ನಂತರ ಅವರು ಮಾತನಾಡಿದರು.

ಯಾದಗಿರಿ ವಿಧಾನಸಭೆ ಕ್ಷೇತ್ರದ ಜನರ ಅನುಕೂಲಕ್ಕಾಗಿ ಈಗಾಗಲೇ ಶಹಾಪುರ ನಗರದಲ್ಲಿ ಶಾಸಕರ ಕಚೇರಿ ಆರಂಭ ಮಾಡಲಾಗಿದೆ. ಶಹಾಪುರ ತಾಲೂಕಿನ 7 ಗ್ರಾಮ ಪಂಚಾಯಿತಿಗಳು ಯಾದಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಹೀಗಾಗಿ ಶಹಾಪುರ ತಾಲೂಕಿನ ಸಮೀಪದಲ್ಲಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ಶಹಾಪುರನಲ್ಲಿ ಕಚೇರಿ ಆರಂಭ ಮಾಡಲಾಗಿದೆ. ಅದೆ ರೀತಿ ಯಾದಗಿರಿ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇಂದು ಕಚೇರಿಯನ್ನು ಆರಂಭ ಮಾಡಲಾಗಿದೆ ಎಂದು ತಿಳಿಸಿದರು. ಕ್ಷೇತ್ರದ ಸಾರ್ವಜನಿಕರು ಕಚೇರಿಗೆ ಆಗಮಿಸಿ ತಮ್ಮ ಅಹವಾಲು ನೀಡಬಹುದು ಎಂದರು.

ಇದನ್ನೂ ಓದಿ: Gold Rate Today: ಏರಿಳಿಯದ ಬಂಗಾರದ ಬೆಲೆ, ಬೆಂಗಳೂರಲ್ಲಿ ಹೀಗಿದೆ ದರ

ಕ್ಷೇತ್ರದ ಪ್ರತಿ ಹಳ್ಳಿಗಳ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಈಗಾಗಲೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದುಕೊಳ್ಳುತ್ತಿದೆ. ನನ್ನ ಐದು ವರ್ಷಗಳ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ, ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ಮೆರೆಗೆ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು.

ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು ಹೇಳಿದರು.

ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ತಂದು ನೀರಾವರಿ ಸೌಲಭ್ಯ ಅನ್ನದಾತರಿಗೆ ಕಲ್ಪಿಸಲಾಗುತ್ತದೆ. ರೈತರು ಈಗ ಭತ್ತ,ಹತ್ತಿ ಹಾಗೂ ಇನ್ನಿತರ ಬೆಳೆ ಬೆಳೆಯಲು ವಿದ್ಯುತ್ ಸಮಸ್ಯೆ ಎದುರಿಸಿ ಬೆಳೆಗೆ ನೀರು ಹರಿಸಲು ಕಷ್ಟಪಡುವ ಬಗ್ಗೆ ಈ ವಿಷಯ ಗಮನಕ್ಕೆ ಬಂದಿದ್ದು ವಿದ್ಯುತ್ ಪರಿವರ್ತಕ ಅಳವಡಿಕೆ, ವಿದ್ಯುತ್ ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆ ಇದ್ದರೆ ಈ ಬಗ್ಗೆ ಸಮಸ್ಯೆ ಬಗೆಹರಿಸಿ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗುತ್ತದೆ ಎಂದರು.

ಕ್ಷೇತ್ರದ ಜನರು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಗಮನಕ್ಕೆ ತನ್ನಿ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆಂದರು.

ಶಾಸಕರ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಗಳು ಇರಲಿದ್ದು, ಸಾರ್ವಜನಿಕರು ಆಗಮಿಸಿ ತಮ್ಮ ಅಹವಾಲು ನೀಡಬಹುದು, ಸಂಬಂಧಪಟ್ಟ ಇಲಾಖೆ ಅವರಿಗೆ ಗಮನಕ್ಕೆ ತಂದು ನಿಮ್ಮ ಸಮಸ್ಯೆಗಳಿಗೆ ಪರಿಹರಿಸಲು ಪ್ರಯತ್ನ ಮಾಡುತ್ತೇನೆ, ಯಾವುದೇ ಹಿಂಜರಿಕೆಯಿಲ್ಲದೇ ಕಚೇರಿಗೆ ಆಗಮಿಸಿ ಅಹವಾಲು ನೀಡಬಹುದು ಎಂದರು.

ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆಗೂ ಮುನ್ನ ಕಚೇರಿಯಲ್ಲಿ ಪೂಜೆ ಕಾರ್ಯಕ್ರಮ ನಡೆಯಿತು.

ಯಾದಗಿರಿಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆಗೂ ಮುನ್ನ ಪೂಜೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: Weather Report : ತಿಂಗಳಾಂತ್ಯದವರೆಗೆ ರಾಜ್ಯದಲ್ಲಿ ತುಂತುರು ಮಳೆ

ಈ ವೇಳೆ ಸನ್ನಿಗೌಡ ಪಾಟೀಲ, ಡಾ.ಮಲ್ಲನಗೌಡ ಪಾಟೀಲ, ನಮ್ರತಾ ಪಾಟೀಲ, ಪೂರ್ಣಿಮಾ ಪಾಟೀಲ, ಡಾ.ಜ್ಯೋತಿ ಪಾಟೀಲ, ಭೀಮಾವತಿ ಪಾಟೀಲ, ಬಸ್ಸುಗೌಡ ಬಿಳ್ಹಾರ, ಮಲ್ಲನಗೌಡ ಕೌಳೂರು, ಶಾಂತರೆಡ್ಡಿ ದೇಸಾಯಿ, ಸೋಮಶೇಖರ್ ಮಸ್ಕನಹಳ್ಳಿ, ಗೌರಿಶಂಕರ ಹಿರೇಮಠ, ಅಶೋಕರೆಡ್ಡಿ ಕುರಿಹಾಳ, ಸಿದ್ದುರೆಡ್ಡಿ ನಾಲವಾರ, ಅಂಬರೀಶ್ ಜಾಕಾ, ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರು, ಅಶೋಕರೆಡ್ಡಿ ಎಲ್ಹೇರಿ, ವೆಂಕಟರೆಡ್ಡಿ ವಣಿಕೇರಿ, ಸುರೇಶ್ ಮಡ್ಡಿ ಸೇರಿದಂತೆ ಅನೇಕರು ಇದ್ದರು.

Exit mobile version