Site icon Vistara News

Yadgiri News: ಶ್ರೀರಾಮ ಮಂದಿರ ಲೋಕಾರ್ಪಣೆ; ಯಾದಗಿರಿ ಜಿಲ್ಲಾದ್ಯಂತ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

Ayodhya Ram Mandir Inauguration, Special pooja offered by Gurumatkal MLA Sharangowda Kandakuru

ಯಾದಗಿರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Ram Mandir) ಲೋಕಾರ್ಪಣೆಗೊಂಡ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾದ್ಯಂತ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ನಗರದ ಬಾಲಾಜಿ ಮಂದಿರದಲ್ಲಿ ಶ್ರೀರಾಮ ಭಕ್ತರು ಬೆಳಿಗ್ಗೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಾಲಾಜಿ ಮಂದಿರದ ಆವರಣದಲ್ಲಿ ಕುದುರೆ ಸಾರೋಟದ ರಥದಲ್ಲಿ ರಾಮ, ಲಕ್ಷ್ಮಣ, ಸೀತಾ ಮಾತಾ, ಆಂಜನೇಯ ವೇಷಧಾರಿ ಮಕ್ಕಳಿಗೆ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಈ ವೇಳೆ ಶ್ರೀರಾಮನ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ಇದನ್ನೂ ಓದಿ: Ram Mandir: ನಾಳೆಯಿಂದ ಸಾರ್ವಜನಿಕರಿಗೆ ರಾಮ ಮಂದಿರ ಮುಕ್ತ; ಆರತಿ, ದರ್ಶನಕ್ಕೆ ಸಮಯ ನಿಗದಿ

ನಗರದ ಶಾಸ್ತ್ರಿ ವೃತ್ತದ ಸಮೀಪದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.

ಯಾದಗಿರಿ ನಗರದ ಶಾಸ್ತ್ರಿ ವೃತ್ತದ ಸಮೀಪದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ವಿಶೇಷ ಪೂಜೆ ಸಲ್ಲಿಸಿದರು.

ಯಾದಗಿರಿ ಹಾಗೂ ಕಲಬುರಗಿ ಗಡಿಭಾಗಕ್ಕೆ ಹಂಚಿಕೊಂಡಿರುವ ಯರಗೋಳ, ಸಂಕನೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ಬೆಟ್ಟದಲ್ಲಿ ಬೆಳಿಗ್ಗೆ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನೆರವೇರಿದವು.

ಯರಗೋಳ ಗ್ರಾಮದ ಹನುಮಾನ್ ಮಂದಿರದಿಂದ ರಾಮಲಿಂಗೇಶ್ವರ ಮಂದಿರದವರಗೆ ಶ್ರೀರಾಮ ಭಕ್ತರು ಭಜನೆ ಮಾಡುತ್ತಾ ಪಾದಯಾತ್ರೆ ನಡೆಸಿದರು‌. ಯರಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಲಿಂಗಪ್ಪ ಹಾಗೂ ಶ್ರೀರಾಮ ಭಕ್ತರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.

ರಾಮಲಿಂಗೇಶ್ವರ ಬೆಟ್ಟದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ರಾಮಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.‌

ಇದನ್ನೂ ಓದಿ: Job Alert: ಬ್ಯಾಂಕ್ ಆಫ್ ಬರೋಡಾದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಬೆಟ್ಟದಲ್ಲಿ ಬಿಜೆಪಿ ಮುಖಂಡರಾದ ಮಹೇಶ್ ರೆಡ್ಡಿ ಮುದ್ನಾಳ, ಸುರೇಶ್ ಅಂಬೀಗರ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ, ರಾಮಜ್ಯೋತಿಯನ್ನು ಬೆಳಗಿಸಿದರು.

Exit mobile version