Site icon Vistara News

Yadgiri News: ಕಾಲುವೆ ನೀರು ಬಿಡುಗಡೆಗೆ ಆಗ್ರಹ; ಶಹಾಪುರದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ

Demand for release of canal water Massive protest by farmers in Shahpur

ಯಾದಗಿರಿ: ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು (Water) ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಶಹಾಪುರನಲ್ಲಿ ಸೋಮವಾರ ರೈತರು ಬೃಹತ್ ಪ್ರತಿಭಟನೆ (Farmers Massive Protest) ನಡೆಸಿ ಸರ್ಕಾರದ (Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಜಲಾಶಯದಿಂದ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕಳೆದ ಒಂದು ವಾರದಿಂದ ಭೀಮರಾಯನಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಗಿತ್ತು.‌ ರೈತ ಸಂಘದ ಬೆಂಬಲದೊಂದಿಗೆ ಸೋಮವಾರ ರೈತರಿಂದ ಶಹಾಪುರ ನಗರ ಬಂದ್‌ಗೆ ಕರೆ ನೀಡಲಾಗಿತ್ತು.

ಇದನ್ನೂ ಓದಿ: Business Guide : 2024ರಲ್ಲಿ ಹೊಸ ಬಿಸಿನೆಸ್‌ ಆರಂಭಿಸಲು 10 ಬೆಸ್ಟ್‌ ಐಡಿಯಾ

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ನೀರಿಗಾಗಿ ಆಗ್ರಹಿಸಿ ಶಹಾಪುರ ನಗರ ಬಂದ್ ಗೆ ಕರೆ ನೀಡಲಾಗಿತ್ತು ಆದರೆ, ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಶಹಾಪುರ ನಗರದ ತಹಸೀಲ್ದಾರ್‌ ಕಚೇರಿಯಿಂದ ಬಸವೇಶ್ವರ ವೃತ್ತದವರಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅನೇಕ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.

ಈ ವೇಳೆ ರೈತ ಮುಖಂಡರಾದ ನಾಗರತ್ನ ಯಕ್ಷಿಂತಿ, ಮಲ್ಲಿಕಾರ್ಜುನ ಸತ್ಯಂಪೇಟೆ ಅವರು ಮಾತನಾಡಿ, ಆಲಮಟ್ಟಿ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಿದೆ. ಆದರೆ ಅಧಿಕಾರಿಗಳು ದಾರಿ ತಪ್ಪಿಸಿ ಸುಳ್ಳು ಮಾಹಿತಿ ನೀಡಿ, ಅನ್ನದಾತರಿಗೆ ಮೋಸ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರ ನೀರು ಬಿಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ ಮಾತನಾಡಿದರು.

ಇದನ್ನೂ ಓದಿ: COVID Subvariant JN1: ರಾಜ್ಯದ 15ಕ್ಕೂ ಹೆಚ್ಚು ಮಂದಿಗೆ ಜೆಎನ್‌1 ಸೋಂಕು ದೃಢ

ಕೂಡಲೇ ಸರ್ಕಾರವು ನೀರು ಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Exit mobile version