Site icon Vistara News

Fire tragedy: ಬಟ್ಟೆ ಅಂಗಡಿಯಲ್ಲಿ ಬೆಂಕಿ, ದಂಪತಿ ಬಲಿ

fire tragedy yadagiri

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಅದರಿಂದ ಮೇಲಿರುವ ಮನೆಯ ದಂಪತಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ಈ ದುರ್ಘಟನೆ ಇಂದು ನಸುಕಿನ ಜಾವ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಇವರಿಬ್ಬರೂ ಬಟ್ಟೆ ವ್ಯಾಪಾರಿ ದಂಪತಿಯಾಗಿದ್ದಾರೆ. ರಾಘವೇಂದ್ರ, ಶಿಲ್ಪಾ ಮೃತಪಟ್ಟ ದುರ್ದೈವಿಗಳು. ಕೆಳಗಿನ ಮಹಡಿಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಸೃಷ್ಟಿಯಾಗಿದ್ದು, ಮೇಲಿರುವ ಮನೆಗೂ ವ್ಯಾಪಿಸಿದೆ. ದಂಪತಿ ಮೇಲಿನ ಮನೆಯಲ್ಲಿ ವಾಸಿಸುತ್ತಿದ್ದು, ಜೀವರಕ್ಷಣೆ ಮಾಡಿಕೊಳ್ಳಲು ಬಾತ್‌ರೂಂಗೆ ತೆರಳಿದ್ದರು. ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದೆ.

ವ್ಯಕ್ತಿ ಶವ ಮೋರಿಯಲ್ಲಿ ಪತ್ತೆ

ರಾಮನಗರ: ವ್ಯಕ್ತಿಯೊಬ್ಬರ ಶವ ಅನುಮಾಸ್ಪದವಾಗಿ ಮೋರಿಯಲ್ಲಿ ಪತ್ತೆಯಾಗಿದೆ.

ಸಿದ್ದು(35) ಮೃತ ವ್ಯಕ್ತಿ. ರಾಮನಗರ ವಿಜಯನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಘಟನೆ ನಡೆದಿದೆ. ವಿಜಯನಗರ ನಿವಾಸಿಯಾಗಿದ್ದ ಸಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಮನೆಯಿಂದ ಹೊರ ಬಂದಿದ್ದ ಸಿದ್ದು ಬೆಳಿಗ್ಗೆ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fire tragedy : ಬೆಂಕಿ ಬಿದ್ದ ಕೊಟ್ಟಿಗೆಯಿಂದ ನಾಲ್ಕು ದನಗಳನ್ನು ರಕ್ಷಿಸಿದ ಸಾಹಸಿ ಕೊನೆಗೆ ತಾನೇ ಸುಟ್ಟು ಹೋದ

Exit mobile version