Site icon Vistara News

Yadgiri News: ರೈತರ ಅನುಕೂಲಕ್ಕಾಗಿ ನಿರಂತರ ವಿದ್ಯುತ್ ಕಲ್ಪಿಸಿ: ಸಚಿವ ಶರಣಬಸಪ್ಪಗೌಡ ದರ್ಶನಾಪುರ

Yadgiri in-charge Minister Sharanbasappa Gowda Darsanapura meeting with KPTCL and gescom officials in yadgiri

ಯಾದಗಿರಿ: ಸರ್ಕಾರ (Government) ನಿಗದಿಪಡಿಸಿದಂತೆ ಜಿಲ್ಲೆಯ ಸಾರ್ವಜನಿಕರ ಹಾಗೂ ರೈತರ (Farmers) ಅನುಕೂಲಕ್ಕಾಗಿ ನಿರಂತರ ಏಳು ತಾಸು ವಿದ್ಯುತ್ ಕಲ್ಪಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೆ.ಪಿ.ಟಿ.ಸಿ.ಎಲ್ ಹಾಗೂ ಜೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, ನಿರಂತರ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ವಿಶೇಷವಾಗಿ ಗ್ರಾಮಾಂತರ ಜನರು ಹಾಗೂ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಂಡು, ನಿರಂತರ ಏಳು ತಾಸು ವಿದ್ಯುತ್ ಕಲ್ಪಿಸಲು ಗಮನ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂ ಓದಿ: Side Effects Of Fiber: ನಾರಿನ ಅಂಶ ಒಳ್ಳೆಯದು; ಆದರೆ ಅತಿಯಾಗಿ ತಿನ್ನಬಾರದು, ಏಕೆಂದರೆ…

ನಗರ ಪ್ರದೇಶ ಹಾಗೂ ಕೈಗಾರಿಕೆಗಳಿಗೆ ನಿರಂತರ ನೀಡುವಂತಹ ವಿದ್ಯುತ್ ಗ್ರಾಮಾಂತರ ಪ್ರದೇಶದ ಜನರಿಗೆ ಹಾಗೂ ರೈತರಿಗೆ ಏಕೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು, ಯಾವುದೇ ರೀತಿಯ ಸಬೂಬು ನೀಡದೆ ಮಾನವೀಯ ನೆಲೆಯ ಮೇಲೆ ನಿರ್ಲಕ್ಷ್ಯ ತೋರದೆ ನಿರಂತರ ಏಳು ತಾಸು ವಿದ್ಯುತ್ ಕಲ್ಪಿಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ದುರಸ್ತಿಯಿರುವ ಟ್ರಾನ್ಸ್‌ಫಾರ್ಮರ್ ತಕ್ಷಣ ಬದಲಾವಣೆ ಮಾಡಬೇಕು. ವಿಳಂಬ ಧೋರಣೆ ಅನುಸರಿಸದಿರಲು ಸೂಚಿಸಿದ ಅವರು, ಅಲ್ಪಾವಧಿ ಹಾಗೂ ದೀರ್ಘಾವಧಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಆಯಾ ಸಹಾಯಕ ಅಭಿಯಂತರರು, ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ತಮಗೆ ವರದಿ ಸಲ್ಲಿಸಬೇಕು. ಅದರಂತೆ ಆಯಾ ಶಾಸಕರ ಗಮನಕ್ಕೂ ತರಬೇಕು. ಸರ್ಕಾರದ ಮಟ್ಟದಲ್ಲಿಯೂ ಈ ಕುರಿತು ಪ್ರಯತ್ನಿಸಲಾಗುವುದು, ಅವಶ್ಯಕ ಅನುದಾನಬೇಕಾದಲ್ಲಿ ದೊರಕಿಸಲು ಪ್ರಯತ್ನಿಸಲಾಗುವುದು. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಆದ್ಯತೆ ಮೇಲೆ ವಿದ್ಯುತ್ ಕಲ್ಪಿಸುವಂತೆ ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ: Karnataka Weather : ಮಳೆಯಾಗಿದ್ದು ಲೇಟು; ಈಗಲೇ ಶುರುವಾಯ್ತು ಚಳಿಗಾಲದ ಏಟು!

ಸಭೆಯಲ್ಲಿ ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪನಾಯಕ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಕಲಬುರಗಿ ಕೆಪಿಟಿಇಎಲ್ ಸಿಇ ಗಿರಿಧರ್ ಕುಲಕರ್ಣಿ, ಜೆಸ್ಕಾಂ ಇಇ ರಾಘವೇಂದ್ರ ಡಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version