ಯಾದಗಿರಿ: ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ (Quality Work) ಕೈಗೊಂಡು, ಜನರಿಗೆ (Public) ಅನುಕೂಲ ಮಾಡಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸೂಚಿಸಿದರು.
ಯಾದಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಮರಕಲ್ ಗ್ರಾಮದ ನಿರ್ಮಾಣ ಹಂತದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಮದರಕಲ್ ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಳಕ್ಕೆ ಅವರು ಭೇಟಿ ನೀಡಿ ಬ್ಯಾರೇಜ್ ಕಾಮಗಾರಿ ಪರಿಶೀಲನೆ ಮಾಡಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಹಾಪುರ ತಾಲೂಕಿನ ಮರಕಲ್ ಹಳ್ಳದ ತಾತ್ಕಾಲಿಕ ರಸ್ತೆಯು ನೀರಿನಲ್ಲಿ ಕೊಚ್ಚಿಕೊಂಡ ಹೋದ ಹಿನ್ನಲೆ ಜನರಿಗೆ ಸಮಸ್ಯೆಯಾಗಿತ್ತು. ಇದನ್ನು ಮನಗೊಂಡ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮರಕಲ್ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ತಾತ್ಕಾಲಿಕ ರಸ್ತೆ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯಕ್ಕಾಗಿ ಸಣ್ಣ ನೀರಾವರಿ ಇಲಾಖೆ ಮೂಲಕ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ತಾತ್ಕಾಲಿಕ ರಸ್ತೆಯು ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲಾಗಿದೆ.
ಇದನ್ನೂ ಓದಿ: Glass Bridge: ಈಗ ಭಾರತದ ಅತಿ ಉದ್ದದ ಗಾಜಿನ ಸೇತುವೆ ಮೇಲೆ ನಡೆದಾಡಿ!
ಬ್ಯಾರೇಜ್ ನಿರ್ಮಾಣದಿಂದ ರೈತರ ಜಮೀನಿಗೆ ನೀರು ನುಗ್ಗದಂತೆ ಕಾಂಪೌಂಡ್ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಿಗದಿತ ಅವಧಿಯೊಳಗೆ ಕಾಮಗಾರಿ ಕೈಗೊಂಡು ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಬೇಕೆಂದರು. ನಂತರ ವಡಗೇರಾ ತಾಲೂಕಿನ ಮದರಕಲ್ ಬ್ಯಾರೇಜ್ ಪರಿಶೀಲನೆ ಮಾಡಿದರು.
ರೈತರ ಸಮಸ್ಯೆ ಆಲಿಕೆ
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿರುವ ಸ್ಥಳಕ್ಕೆ ಮರಕಲ್,ಕೊಳ್ಳುರು ಗ್ರಾಮದ ರೈತರು ಆಗಮಿಸಿ ಶಾಸಕರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನೋವು ತೊಡಗಿಕೊಂಡರು. ಬೆಳೆಗೆ ಹಾನಿಯಾಗದಂತೆ ತಡೆಗೊಡೆ ನಿರ್ಮಾಣ ಮಾಡಬೇಕು. ಅದೆ ರೀತಿ ಹಳ್ಳಿ ರಸ್ತೆಯು ಹದಗೆಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: G20 Summit 2023: ಜಿ20 ವೇಳೆ ಗಮನ ಸೆಳೆದ ಕೊನಾರ್ಕ್ ಚಕ್ರ, ಬೈಡೆನ್‌ಗೂ ಪರಿಚಯ ಮಾಡಿದ ಮೋದಿ; ಏನಿದು?
ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ನರೇಂದ್ರ ,ತಹಸೀಲ್ದಾರ್ ಉಮಾಕಾಂತ ಹಳ್ಳಿ ಸೇರಿದಂತೆ ಅನೇಕರು ಇದ್ದರು.