Site icon Vistara News

Yadgiri News: ಯಾದಗಿರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ

MLA Chennareddy Patil drives for Brahmashree Narayan Guru Jayanthotsav program in Yadgiri

ಯಾದಗಿರಿ: ಸಾಮಾಜಿಕ ಸಮಾನತೆಯನ್ನು (Social Equality) ತರಲು ಜೀವನವಿಡಿ ಹೋರಾಟ ಮಾಡಿ, ಜಾತಿಯ ವಿಷ ವೃಕ್ಷವನ್ನು ಕಿತ್ತುಹಾಕಿ, ಸರ್ವರ ಸಮಾನತೆಯನ್ನು ತರಲು ಪ್ರಯತ್ನಪಟ್ಟು ಯಾಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು (Brahmashree Narayan Guru) ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಸಭೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಕಾಳಜಿಯುಳ್ಳವರಾಗಿದ್ದ ನಾರಾಯಣ ಗುರು ಅವರು ಸಮಾಜದ ಅನಿಷ್ಟ ಪದ್ಧತಿ, ತಾರತಮ್ಯ, ಮೂಢನಂಬಿಕೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು ಮತ್ತು ಅಸಮಾನತೆ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿದರು. ತಳ ಸಮುದಾಯದವರಿಗೆ ಧಾರ್ಮಿಕ ಶಿಕ್ಷಣ ನೀಡಿ, ಶಿಕ್ಷಣದ ಮಹತ್ವ ಸಾರಿ, ಇಡೀ ಜಗತ್ತಿನಲ್ಲಿ ಮೌನ ಕ್ರಾಂತಿ ಮಾಡಿ, ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದ ಮಹಾನುಭಾವರು ಎಂದರು.

ಇದನ್ನೂ ಓದಿ: Ramon Magsaysay Award: ಅಸ್ಸಾಮ್ ಮೂಲದ ಕ್ಯಾನ್ಸರ್ ತಜ್ಞ ಡಾ. ರವಿ ಕಣ್ಣನ್‌ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ!

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಅವರು ಸಮಾಜಕ್ಕೆ ಸಾರಿದ್ದಾರೆ. ಕತ್ತಲ ಲೋಕಕ್ಕೆ ಜ್ಞಾನವೆಂಬ ದೀಪ ಬೆಳಗಿದ ವಿಶ್ವ ಗುರುಗಳಾಗಿ ಜಗತ್ತಿಗೆ ವಿದ್ಯೆ ಹಾಗೂ ಸಂಘಟನೆಯ ಜಾಗೃತಿ ಮೂಡಿಸಿದ ಮಹಾನ್ ಚೇತನಾ ಶಕ್ತಿಯೇ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದರು.

ಕಾರ್ಯಕ್ರಮದಲ್ಲಿ ಅಶೋಕ ಹಡಪದ ರಾಜನಕೋಳೂರು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯಾದಗಿರಿ ಲಕ್ಷ್ಮೀ ನಗರದ ಈಶಾ ಪಡಶೆಟ್ಟಿ ಯುವತಿಯು ಭರತನಾಟ್ಯ ನೃತ್ಯ ಪ್ರದರ್ಶಿಸಿದರು.

ಇದನ್ನೂ ಓದಿ: ಸೆಪ್ಟೆಂಬರ್​ ತಿಂಗಳು ಭಾರತ ತಂಡಕ್ಕೆ ಅನ್​ಲಕ್ಕಿ; ಅದರಲ್ಲೂ ಪಾಕ್​ ತಂಡದ ಎದುರು…

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಗರಿಮಾ ಪನ್ವಾರ, ಎಸ್ಪಿ ಡಾ.ಸಿ.ಬಿ ವೇದಮೂರ್ತಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಅನೇಕರು ಇದ್ದರು. ಗುರುಪ್ರಸಾದ್ ವೈದ್ಯ ನಿರೂಪಿಸಿದರು.

Exit mobile version