ಯಾದಗಿರಿ: ನವದೆಹಲಿಯ (New Delhi) ಭಾರತ ಮಂಟಪದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದ ಸಂಕಲ್ಪ ಸಪ್ತಾಹ ಕಾರ್ಯಕ್ರಮದಲ್ಲಿ ಯಾದಗಿರಿ (Yadgiri) ಜಿಲ್ಲೆಯ ಇಬ್ಬರು ಗ್ರಾಪಂ ಜನಪ್ರತಿನಿಧಿಗಳು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭಾಗವಹಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ರಾಜ್ಯದ 14 ತಾಲೂಕಿನ ಮಹತ್ವಾಕಾಂಕ್ಷೆ ವಲಯ ಮಟ್ಟದ ತಾಲೂಕುಗಳನ್ನು ಕೇಂದ್ರ ನೀತಿ ಆಯೋಗ ಆಯ್ಕೆ ಮಾಡಿಕೊಂಡಿದೆ. ದೇಶಗಳಲ್ಲಿ ಹಿಂದುಳಿದ ತಾಲೂಕಗಳನ್ನು ಅಭಿವೃದ್ಧಿ ಹೊಂದಿರುವ ತಾಲೂಕಿನ ಮಟ್ಟಿಗೆ ಅಭಿವೃದ್ಧಿ ಪಡಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಸ್ವಚ್ಛತೆ, ಮೂಲಭೂತ ಸೌಕರ್ಯಗಳ ಸೇರಿ ಹಲವು ಅಂಶಗಳ ಆಧಾರದ ಮೇಲೆ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ: BEML Group C Recruitment: ಐಟಿಐ ಪಾಸಾದವರಿಗೆ ಸಿಹಿ ಸುದ್ದಿ; ಬಿಇಎಂಎಲ್‌ನಲ್ಲಿ 119 ಹುದ್ದೆಗೆ ಅರ್ಜಿ ಸಲ್ಲಿಸಿ
ಈ ಹಿನ್ನಲೆಯಲ್ಲಿ ರಾಜ್ಯದ 14 ತಾಲೂಕುಗಳಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ವಲಯ ಪಟ್ಟಿಗೆ ಆಯ್ಕೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯು ಕೇಂದ್ರದ ನೀತಿ ಆಯೋಗದ ವರದಿ ಪ್ರಕಾರ ಹಿಂದುಳಿದ ಜಿಲ್ಲೆಯಾಗಿದ್ದು, ಅದರಲ್ಲಿ ವಡಗೇರಾ ತಾಲೂಕು ವಲಯ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಹೀಗಾಗಿ ವಡಗೇರಾ ತಾಲೂಕಿನ ಹೈಯ್ಯಾಳ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಮಾತನೂರು, ಗುರುಸಣಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೌತಮ್ ಕ್ರಾಂತಿ, ವಡಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗವಾರ ಅವರನ್ನು ಸಂಕಲ್ಪ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಸಂಕಲ್ಪ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: New York Flood: ಶತಮಾನದ ಮಳೆಗೆ ತತ್ತರಿಸಿದ ನ್ಯೂಯಾರ್ಕ್; ಕೆರೆಯಂತಾಗಿವೆ ಊರುಗಳು!
ಈ ಬಗ್ಗೆ ಹೈಯ್ಯಾಳ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಮಾತನೂರು ಮಾತನಾಡಿ, ಪಿಎಂ ಮೋದಿ ಅವರು ತಾಲೂಕುಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಹೀಗೆ ಹಲವು ಅಂಶಗಳ ಬಗ್ಗೆ ಅಭಿವೃದ್ಧಿ ಮಾಡುವ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ನಾವು ಅವರ ಸಲಹೆಯಂತೆ ಅಧಿಕಾರಿಗಳ ಸಹಕಾರದೊಂದಿಗೆ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.