Site icon Vistara News

Yadgiri News: ರೈತರು ನವ ತಂತ್ರಜ್ಞಾನದ ಸಹಾಯದಿಂದ ಹೆಚ್ಚಿನ ಲಾಭ ಪಡೆಯಿರಿ: ಸಚಿವೆ ಕರಂದ್ಲಾಜೆ

Union Minister Shobha Karandlaje inaugurated the Administration Building of ICAR Agricultural Science Centre at Kavadimatti

ಯಾದಗಿರಿ: ರೈತರು (Farmers) ವಿವಿಧ ಮಾದರಿಯ ಬೇಸಾಯ ಪದ್ಧತಿಗಳು, ಬಗೆ ಬಗೆಯ ತಳಿಗಳ ಪಶು ಸಾಕಾಣಿಕೆ ಪದ್ದತಿ ಜತೆಗೆ ನವ ತಂತ್ರಜ್ಞಾನದ (New Technology) ಸಹಾಯದಿಂದ ಹೆಚ್ಚಿನ ಆದಾಯ ಪಡೆದು ಅಭಿವೃದ್ಧಿ (Development) ಹೊಂದುವುದು ಸರ್ಕಾರಗಳ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಇವರ ಸಹಯೋಗದಲ್ಲಿ ಕವಡಿಮಟ್ಟಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಮತ್ತು ರೈತ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೃಷಿ ವಿಜ್ಞಾನಿಗಳ ಮೂಲಕ ಉಳಿಮೆ ಭೂಮಿ, ಅದರ ವ್ಯಾಪ್ತಿಯ ವಾತಾವರಣ ಹಾಗೂ ಅದಕ್ಕೆ ಅನುಗುಣವಾಗಿ ಬೆಳೆಯುವ ಬೆಳೆಗಳ ಜೊತೆಗೆ ಹೆಚ್ಚು ಆದಾಯ ನೀಡುವ ಕೃಷಿಗೆ ಸಂಬಂಧಿಸಿದ ಮಾಹಿತಿ, ತರಬೇತಿ ಮತ್ತು ಸಹಾಯ ಪಡೆದು ದ್ವಿಗುಣ ಆದಾಯ ಪಡೆಯಬೇಕು ಎಂದು ತಿಳಿಸಿದರು.

ಹವಾಮಾನಕ್ಕೆ ಹೊಂದಿಕೊಳ್ಳುವ 1500 ಕ್ಕೂ ಹೆಚ್ಚು ಬಗೆಯ ಬಿತ್ತನೆ ಬೀಜಗಳನ್ನು ದೇಶದಲ್ಲಿ ಸಂಶೋಧನೆ ಮಾಡಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ: Mysore Dasara : ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ

ಕಳೆದ 2 ವರ್ಷದಲ್ಲಿ ತರಕಾರಿ, ಹಣ್ಣು, ಮಾಂಸ ಮತ್ತು ಹೂವುಗಳ ರಫ್ತುವಿನಲ್ಲಿ ದೇಶ ಪ್ರಪಂಚದ 8ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು 340 ಮೆಟ್ರಿಕ್ ಟನ್ ಆಹಾರಧಾನ್ಯ, 240 ಮೆಟ್ರಿಕ್ ಟನ್ ಹಣ್ಣುಗಳನ್ನು ಬೆಳೆಯುತ್ತಿದ್ದು ರೈತರ ಶ್ರಮದಿಂದ ಎಂದ ಅವರು, ಕೇಂದ್ರ ಸರ್ಕಾರ ರೈತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು 1 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು, ರೈತರು ಅನುದಾನದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು.

ಇದನ್ನೂ ಓದಿ: World Egg Day: ಪಶು ವೈದ್ಯಕೀಯ ಕಾಲೇಜುಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಕೆಶಿ

ಇದೇ ಸಂದರ್ಭದಲ್ಲಿ ಐಸಿಎಆರ್ ಅಟಾರ್ನಿ ಡೈರೆಕ್ಟರ್ ಡಾ.ವಿ. ವೆಂಕಟಸುಬ್ರಹ್ಮಣ್ಯನ್, ಕುಲಸಚಿವರು ಮತ್ತು ಸದಸ್ಯ ಕಾರ್ಯದರ್ಶಿ ಡಾ. ಎಂ. ವೀರನಗೌಡ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣೆ ನಿರ್ದೇಶಕ ಡಾ. ಎಸ್.ಬಿ. ಗೌಡಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಮುತ್ತುರಾಜ, ಸುರಪುರ ತಹಸೀಲ್ದಾರ್‌ ಕೆ.ವಿಜಯಕುಮಾರ, ಶಹಾಪುರ ಕೈಗಾರಿಕೋದ್ಯಮಿ ಮಲ್ಲಿಕಾರ್ಜುನ ಡಿ., ಖಾನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಕೆಂಗುರಿ, ಬಸವರಾಜ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version