Site icon Vistara News

Yadgiri News: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಇಷ್ಟಲಿಂಗ ಪೂಜೆ ನಡೆಸಿ ಪ್ರತಿಭಟನೆ

Demanding reservation of 2A for Panchmasali Samaj perform Ishtalinga Puja and protest

ಯಾದಗಿರಿ: ಪಂಚಮಸಾಲಿ, ದೀಕ್ಷಾ ಲಿಂಗಾಯತರಿಗೆ ರಾಜ್ಯ ಸರ್ಕಾರ 2ಎ ಮೀಸಲಾತಿ (2A Reservation) ಸೌಲಭ್ಯ ಕಲ್ಪಿಸಬೇಕು ಹಾಗೂ ಎಲ್ಲಾ ಲಿಂಗಾಯತ ಸಮಯದಾಯದ ಒಳಪಂಗಡದವರಿಗೆ ಒಬಿಸಿ (OBC) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ (Yadgiri News) ನಡೆಸಲಾಯಿತು.

ಜಿಲ್ಲೆಯ ಹುಣಸಗಿ ಪಟ್ಟಣದ ಶ್ರೀ ಮಹಾಂತ ವೃತ್ತದ ವಿಜಯಪುರ-ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಇಷ್ಟಲಿಂಗ ಪೂಜೆ ನಡೆಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕೂಡಲೇ ಸರ್ಕಾರವು ಪಂಚಮಸಾಲಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ

ಈ ವೇಳೆ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಸಮುದಾಯಕ್ಕೆ ಮಾರಕವಾದ ಕಾಂತರಾಜ್ ವರದಿಯನ್ನು ಸರ್ಕಾರ ಅನುಷ್ಠಾನ ಮಾಡದೇ ತಿರಸ್ಕಾರ ಮಾಡಬೇಕು. ಕಾಂತರಾಜ್ ವರದಿಯು ಅವೈಜ್ಞಾನಿಕವಾಗಿದೆ. ಸರ್ಕಾರವು ಪುನರ್ ವೈಜ್ಞಾನಿಕವಾಗಿ, ಕಾನೂನು ಬದ್ಧವಾಗಿ ಜಾತಿ ಗಣತಿ ಮಾಡಬೇಕು ಎಂದರು.

ಲಿಂಗಾಯತರ ಬೆಂಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರು ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದ 11 ಜಿಲ್ಲೆಯಲ್ಲಿ ಈಗಾಗಲೇ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಕಾಂತರಾಜ್ ವರದಿಯನ್ನು ಸ್ವೀಕಾರ ಮಾಡಿದ್ದು, ಅನುಷ್ಠಾನಕ್ಕೆ ತರಬಾರದು. ಲಿಂಗಾಯತರ ಮನೆ ಮನೆಗೆ ಬಂದು ಪ್ರಮಾಣಿಕವಾಗಿ ಜಾತಿಗಣತಿ ಮಾಡಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

ಲೋಕಸಭಾ ಚುನಾವಣೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರ ಒಳಗೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕಿದೆ. ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದರು.

ಮೀಸಲಾತಿ ಆದೇಶ ಪತ್ರ ಪಡೆಯುವವರೆಗೂ ನಾನು ಹೋರಾಟ ಕೈಬಿಡುವದಿಲ್ಲ. ನಾನು ಮಠ ಬಿಟ್ಟು ಹೋರಾಟ ಮಾಡುತ್ತಿದ್ದೇನೆ. ಸಚಿವರು ಹಾಗೂ ಶಾಸಕರು ಅಧಿವೇಶನದಲ್ಲಿ ಮಾತನಾಡಬೇಕಿದೆ ಎಂದರು.

ಕಲಬುರಗಿಯಲ್ಲಿ ಹೋರಾಟ

ಮಾರ್ಚ್ 10 ರಂದು ಕಲಬುರಗಿಯಲ್ಲಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡಲಾಗುತ್ತದೆ. ನಮ್ಮ ಹೋರಾಟಕ್ಕೆ ಗೆಲುವು ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

ಈ ವೇಳೆ ಚಂದ್ರಶೇಖರ ದಂಡೀನ್, ಶರಣು ದಂಡೀನ್, ಮಲ್ಲನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಮುರಿಗೆಣ್ಣ ದೇಸಾಯಿ, ಅಮರಣ್ಣ ದೇಸಾಯಿ, ಬಸವರಾಜ ಮಲಗಲದಿನ್ನಿ, ಸಿದ್ದಣ್ಣ ಮಲಗಲದಿನ್ನಿ, ಹೊನ್ನಕೇಶವ ದೇಸಾಯಿ, ರುದ್ರಗೌಡ ಸೋಲಬಗೌಡ್ರ, ಮೋಹನ್ ಪಾಟೀಲ್, ಮಲ್ಲನಗೌಡ ಹಾರಾಗಡ್ಲಿ, ಬಸಣ್ಣ ಯಾಳಗಿ, ಈಶ್ವರಪ್ಪ ಶ್ರೀಗಿರಿ, ಮಲ್ಲಿಕಾರ್ಜುನ ದೇಸಾಯಿ, ಚಂದ್ರಶೇಖರ ಹೊಕ್ರಾಣಿ, ಶಾಂತಗೌಡ ಪಾಟೀಲ, ಬಸವರಾಜ ಜೇವರ್ಗಿ,ಅರುಣ ಕುಮಾರ, ಬಿ ಬಿ ಬಿರಾದಾರ, ಹೊನ್ನಪ್ಪ ಗೌಡ ಮೇಟಿ, ಭೀಮನಗೌಡ ಮಲ್ಕಾಪೂರ, ಡೇವಿಡ್ ಮುದನೂರು, ವಿರೇಶ್ ಮಲ್ಲಾ, ಶಿವು ಹೊಕ್ರಾಣಿ, ವೀರಣ್ಣ ಚಂಗಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Exit mobile version