ಯಾದಗಿರಿ: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘದ ನಂದಿನಿ ಹಾಲು (Nandini Milk) ಖರೀದಿಸಿ, ಹಾಲು ಸೇವನೆ ಮಾಡಬೇಕು ಎಂದು ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಪಾಟೀಲ ತಿಳಿಸಿದರು.
ಯಾದಗಿರಿಯ ಸುಭಾಷ್ ವೃತ್ತದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿ- ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Hampi University: ಹಂಪಿ ಕನ್ನಡ ವಿವಿಗೆ ಮತ್ತೆ ಕರೆಂಟ್ ಶಾಕ್; 97.80 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ!
ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ಕಲಬೆರಕೆ ಹಾಲು ಮಾರಾಟವಾಗುತ್ತಿದ್ದು, ರಾಸಾಯನಿಕ ಮಿಶ್ರಿತ ಹಾಲು ಆರೋಗ್ಯಕ್ಕೆ ಪರಿಣಾಮ ಬೀರಲಿದೆ ಎಂದ ಅವರು, ಕರ್ನಾಟಕ ಹಾಲು ಉತ್ಪಾದಕರ ಮಂಡಳಿಗೆ ರೈತರು ಹಾಲು ಪೂರೈಕೆ ಮಾಡುತ್ತಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರು ಹಾಲು ಪೂರೈಕೆ ಮಾಡುತ್ತಾರೆ. ಪ್ರಾಥಮಿಕ ಹಾಲು ಉತ್ಪಾದಕರ ಸಂಘದಿಂದ ಹಾಲು ಮಾರುಕಟ್ಟೆಗೆ ಬಿಡುಗಡೆಯಾಗುವರೆಗೂ ಹಲವಾರು ಪರೀಕ್ಷೆ ನಡೆಸಿ ಕೆಎಂಎಫ್ ಹಾಲು ತಯಾರು ಮಾಡಲಾಗುತ್ತದೆ. ನಂದಿನಿ ಹಾಲು ಹಾಗೂ ಉತ್ಪನ್ನಗಳನ್ನು ಗ್ರಾಹಕರು ಖರೀದಿ ಮಾಡಬೇಕು ಎಂದರು.
ಮಕ್ಕಳಿಗೆ ರಾಸಾಯನಿಕ ಮಿಶ್ರಿತ ಹಾಲು ಕೊಡದೆ ಆರೋಗ್ಯಕ್ಕೆ ಪೂರಕವಾದ ನಂದಿನಿ ಹಾಲು ಕೊಡಬೇಕು. ರಾಸಾಯನಿಕ ಮಿಶ್ರಿತ ಹಾಲು ಬೇಗ ಕೆಟ್ಟು ಹೋಗುವುದಿಲ್ಲ. ನಂದಿನಿ ಹಾಲು ಬೇಗ ಕೆಡುತ್ತವೆ ಇದಕ್ಕೆ ಕಾರಣ ಗುಣಮಟ್ಟದ ಹಾಲು ಇರುವುದು. ನಂದಿನಿ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಮಾಡುವದಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ನಂದಿನಿ ಹಾಲು ಸೇವಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Ballari News: ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಕುವೆಂಪು, ಅಶ್ವತ್ಥ್ ಸಾಧನೆಗೆ ಶ್ಲಾಘನೆ
ಕಾರ್ಯಕ್ರಮದಲ್ಲಿ ಮಾರುಕಟ್ಟೆ ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ ಪತ್ತಾರ್, ಮಾರುಕಟ್ಟೆ ಮೇಲ್ವಿಚಾರಕ ವಿಶ್ವನಾಥರೆಡ್ಡಿ, ಮಾರುಕಟ್ಟೆ ಅಧಿಕಾರಿ ಅವಿನಾಶ್ ಜಾಧವ್, ಮಾರುಕಟ್ಟೆ ಅಧೀಕ್ಷಕ ಶರಣ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.