Site icon Vistara News

Yadgiri News: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಎಸ್ಪಿ ಸಂಗೀತಾ

Yadgiri SP Sangeeta spoke in Walk and run awareness campaign on ill effects of drug use in Yadagiri

ಯಾದಗಿರಿ: ಇಂದಿನ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಮಾರು ಹೋಗದೆ ಉತ್ತಮ ಆರೋಗ್ಯದ (Health) ಕಡೆ ಕಾಳಜಿ ಹೊಂದಿ, ಓದಿ ಉನ್ನತ ಗುರಿ ಹೊಂದಿ, ಹೆತ್ತವರ ಕನಸು ಸಾಕಾರಗೊಳಿಸಬೇಕಿದೆ ಎಂದು ಎಸ್ಪಿ ಸಂಗೀತಾ ತಿಳಿಸಿದರು.

ಯಾದಗಿರಿ ಜಿಲ್ಲಾ ಪೊಲೀಸ್ ಹಾಗೂ ನಗರ ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಾಕ್ ಹಾಗೂ ರನ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅಮಲು ಪದಾರ್ಥಗಳ ಸೇವನೆಯಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಡ್ರಗ್ಸ್ ಸೇವನೆಯು ಕೆಲ ಕ್ಷಣ ಆನಂದ ನೀಡುತ್ತದೆ, ಆದರೆ ನಂತರ ಅದು ದೇಹದಲ್ಲಿ ಪರಿಣಾಮ ಬೀರಿ ಡ್ರಗ್ಸ್ ಸೇವನೆ ಮಾಡುವ ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗಲಿದೆ. ಇಂದಿನ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಮಾರು ಹೋಗದೆ ಉತ್ತಮ ಆರೋಗ್ಯದ ಕಡೆ ಕಾಳಜಿ ಹೊಂದಿ ಓದಿ ಉನ್ನತ ಗುರಿ ಹೊಂದಿ ಹೆತ್ತವರ ಕನಸು ಸಾಕಾರಗೊಳಿಸಬೇಕಿದೆ ಎಂದರು.

ಇದನ್ನೂ ಓದಿ: CM Siddaramaiah : ಇಂದಿರಾ ಕ್ಯಾಂಟೀನ್, ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ: ಸಿಎಂ ಘೋಷಣೆ

ಶಾಲೆ ಸುತ್ತಮುತ್ತಲು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮಾಡಲಾಗಿದೆ. ಮಾರಾಟ ಮಾಡುವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಕೂಡ ಡ್ರಗ್ಸ್ ಸೇವಿಸಬಾರದು ಎಂದು ತಿಳಿಸಿದ ಅವರು, ಡ್ರಗ್ಸ್ ಸಂಗ್ರಹ ಹಾಗೂ ಮಾರಾಟ ಮಾಡಿದರೆ ಕಠಿಣ ಶಿಕ್ಷೆಯ ಅಪರಾಧದ ಬಗ್ಗೆ ತಿಳಿಸಿದರು.

ಈ ವೇಳೆ ವೈದ್ಯ ಡಾ. ವಿರೇಶ್ ಜಾಕಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪೋಷಕರ ಆಸೆಯಂತೆ ಓದಿ ಕೀರ್ತಿ ತರಬೇಕು. ಯಾವುದೇ ಕೆಟ್ಟ ಚಟಗಳಿಗೆ ದಾಸರಾಗಬಾರದು. ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮಾದಕ ದ್ರವ್ಯಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ಇದನ್ನೂ ಓದಿ: Aase Kannada Serial: ನಟ ರಮೇಶ್ ಅರವಿಂದ್ ಮನಗೆದ್ದ ‘ಆಸೆ’ ಧಾರಾವಾಹಿ!

ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್ಪಿ ಧರಣೇಶ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಡಿವೈಎಸ್ಪಿ ಬಸವರಾಜ ಹೀರಾ, ಡಿವೈಎಸ್ಪಿ ಭರತ್ ತಳವಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂಗಪ್ಪ ಪೂಜಾರಿ, ಪಿಐಗಳಾದ ದೇವೇಂದ್ರಪ್ಪ, ವಿನಾಯಕ, ಸಂಜೀವ್ ಕುಮಾರ್, ಸಿಪಿಐಗಳಾದ ಪಿ. ಸುನೀಲ್ ಮೂಲಿಮನಿ, ಪಿಎಸ್‌ಐ ಗಳಾದ ಪರಶುರಾಮ ಜೆ.ಸಿ, ಮಹಾಂತೇಶ ಪಾಟೀಲ ಹಾಗೂ ಸಿಬ್ಬಂದಿಗಳಾದ ರವೀಂದ್ರ , ಮಡಿವಾಳಪ್ಪ, ನಾಗಪ್ಪ ಇತರೆ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Exit mobile version