Site icon Vistara News

Yadgiri News: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

Huge protest in Vadagera Taluk demanding inclusion of Kuruba community in Scheduled Tribe

ಯಾದಗಿರಿ: ಗೊಂಡ ಕುರುಬ, ಜೇನು ಕುರುಬ, ಕಾಡು ಕುರುಬ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ಪ್ರದೇಶ ಗೊಂಡ (ಕುರುಬ) ಸಂಘದಿಂದ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ (Protest) ನಡೆಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ, ಪಟ್ಟಣದ ಹೊನ್ನಯ್ಯ ತಾತ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ತಹಶೀಲ್ದಾರರ ಕಚೇರಿ ಆವರಣದೊಳಗೆ ಕುರಿಗಳನ್ನು ನುಗ್ಗಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಹಸೀಲ್ದಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: Raichur News: ಲಿಂಗಸುಗೂರಿನ ಸರ್ಕಾರಿ ಶಾಲೆಯಲ್ಲಿ ಹಳ್ಳಿ ಸೊಗಡು ಅನಾವರಣ

ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ಕಿರಿಯ ಶ್ರೀಗಳಾದ ಶ್ರೀ ಲಿಂಗಬೀರ ದೇವರು ಮಾತನಾಡಿ, ಯಾದಗಿರಿ, ಬೀದರ್ ಕಲಬುರಗಿ ಜಿಲ್ಲೆಗಳ ಕುರುಬರನ್ನು ಗೊಂಡ ಪರ್ಯಾಯವಾಗಿ ಪರಿಗಣಿಸಲು 1997 ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014ರ ಸಿದ್ದರಾಮಯ್ಯನವರ ಸರ್ಕಾರ ಕುಲಶಾಸ್ತ್ರ ಅಧ್ಯಯನದ ವರದಿಯ ಪೂರಕ ದಾಖಲೆಗಳನ್ನು ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು ಎಂದು ತಿಳಿಸಿದರು.

ಅಲೆಮಾರಿ ಸಂಚಾರಿಗಳಾಗಿ ಊರೂರು ಸುತ್ತುತ್ತಿದ್ದ ಗೊಂಡ ಕುರುಬರನ್ನು ಬ್ರಿಟೀಷರ ಕಾಲದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಅಲ್ಲದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಸಂವಿಧಾನದಲ್ಲಿ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು ಎಂದು ಹೇಳಿದರು.

ಇದನ್ನೂ ಓದಿ: Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

ಪ್ರತಿಭಟನೆಯಲ್ಲಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮರಿಗೌಡ ಹುಲಕಲ, ಸಿದ್ದಣ್ಣಗೌಡ ಕಾಡಂನೋರ್, ವಿಶ್ವನಾಥ ನೀಲಹಳ್ಳಿ, ಸಾಯಬಣ್ಣ ವರಕೇರಿ, ಚಂದ್ರಶೇಖರ್ ವಾರದ, ಮರೇಪ್ಪ ಬಿಳಾರ, ಸಿದ್ದರಾಮಪ್ಪ ಅರಿಕೇರಾ, ಸಾಯಬಣ್ಣ ಕೆಂಗೂರಿ, ಸಿದ್ದಪ್ಪ ಸಂಕೀನ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ ಕರಿಕಳ್ಳಿ, ಪ್ರಭು ವಾರದ, ಮರೇಪ್ಪ ಜಡಿ, ಮಲ್ಲಯ್ಯ ಕಸಬಿ, ಮಲ್ಲಿಕಾರ್ಜುನ ಕರ್ಕಳ್ಳಿ, ಚನ್ನಕೇಶವ ಗೌಡ ಬಾಣತಿಹಾಳ, ಹೊನ್ನಪ್ಪ ಮುಸ್ಟೂರು, ಶಿವು ಪೂಜಾರಿ ಹೈಯಾಳ, ಭಾಗಣ್ಣ ತಡಿಬಿಡಿ, ಮರಿಲಿಂಗಪ್ಪ ಕುಮನೂರ, ಬೀರೇಶ್, ಹಣಮಂತರಾಯ ಜಡಿ, ನಂದಪ್ಪ ಗೌಡ ಹೊರಟೂರ, ಹಣಮಂತ ಪೂಜಾರಿ ಕಂದಳ್ಳಿ, ಹೊನ್ನಪ್ಪ ಕಡೇಚೂರ, ಅನಿಲ್ ಗೌಡ ತೇಕರಾಳ, ಬೀರಲಿಂಗ ಮುಂಡರಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version